ನವದೆಹಲಿ:ಪ್ರವಾಸಿ ಬಾಂಗ್ಲಾ ವಿರುದ್ಧ ನಾಳೆ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ಆರಂಭಗೊಳ್ಳಲಿದ್ದು, ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಮಹಾಟೂರ್ನಿಯಿಂದಾಗಿ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
ನೆಟ್ನಲ್ಲಿ ಟೀಂ ಇಂಡಿಯಾ ಅಭ್ಯಾಸ ನಾಳೆ ಪಂದ್ಯ ನಡೆಯಲಿರುವ ಕಾರಣ ಟೀಂ ಇಂಡಿಯಾ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ 19 ವರ್ಷದ ಬಾಲಕನೊಬ್ಬ ಬ್ಯಾಟಿಂಗ್ ದಿಗ್ಗಜರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅವರನ್ನ ಕ್ಲೀನ್ ಬೋಲ್ಡ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
19 ವರ್ಷದ ಡೆಲ್ಲಿ ಕ್ರಿಕೆಟರ್ ಕೇಶವ್ ದಾಬಸ್ ನೆಟ್ನಲ್ಲಿ ಇಬ್ಬರಿಗೂ ಬೌಲಿಂಗ್ ಮಾಡುತ್ತಿದ್ದಾಗ ವಿಕೆಟ್ ಪಡೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬೌಲರ್ ಆಗಿರುವ ಈ ಕ್ರಿಕೆಟರ್ ಬ್ಯಾಟಿಂಗ್ನಲ್ಲೂ ಅನೇಕ ಸಲ ಮಿಂಚು ಹರಿಸಿದ್ದಾರೆ. ಸ್ಥಳೀಯ ಕ್ರಿಕೆಟ್ನಲ್ಲಿ ಡೆಲ್ಲಿ ತಂಡವನ್ನ ಪ್ರತಿನಿಧಿಸುತ್ತಿರುವ ಈ ಬಾಲಕ ಒಬ್ಬ ಅದ್ಭುತ ಪ್ರತಿಭೆಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.
ಬ್ಯಾಟಿಂಗ್ನಲ್ಲಿ ಟೀಂ ಇಂಡಿಯಾ ಪ್ಲೇಯರ್ ಸುರಿಂದ್ರ ಖಾನ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಈ ಬೌಲರ್, ಇದೇ ಮೊದಲು ಟೀಂ ಇಂಡಿಯಾ ಕ್ರಿಕೆಟರ್ಸ್ಗೆ ಬೌಲಿಂಗ್ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಏಕದಿನ ಕ್ರಿಕೆಟ್ ಸರಣಿ ಆಡಲು ಬಂದಾಗ ಸಹ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು.