ನವದೆಹಲಿ :ಕಿಂಗ್ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿ ಈ ಮೂವರು ವಿಶ್ವಶ್ರೇಷ್ಠ ಮಹಾನ್ ಬ್ಯಾಟ್ಸ್‌ಮನ್‌ಗಳು. ಅದರಲ್ಲಿ ಎರಡು ಮಾತಿಲ್ಲ. ಒನ್‌ಡೇನಲ್ಲಿ ಈ ಮೂವರು ಬ್ಯಾಟ್ಸ್‌ಮೆನ್‌ಗಳ ವೈಯಕ್ತಿಕ ಅತಿ ಹೆಚ್ಚು ಸ್ಕೋರ್ ಒಂದೇಯಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಬೆಳಗಬೇಕು,ಬೆಳಗುತ್ತೆ!
ಬಂಗಾಳ ಹುಲಿ, ದಾದಾ ಸೌರವ್ ಗಂಗೂಲಿ, ರಾಂಚಿ ಱಂಬೋ ಮಹೇಂದ್ರ ಸಿಂಗ್ ಧೋನಿ ಹಾಗೂ ದಿಲ್ಲಿವಾಲಾ ಕಿಂಗ್ ವಿರಾಟ್ ಕೊಹ್ಲಿ ರೀತಿಯ ಅತ್ಯದ್ಭುತ ಪ್ಲೇಯರ್ಸ್ ಮತ್ತು ಕ್ಯಾಪ್ಟನ್‌ಗಳನ್ನ ಪಡೆದಿರೋದು ಭಾರತೀಯರ ಭಾಗ್ಯ. ಆದರೆ, ನೀವು ನಂಬ್ತಿರೋ ಇಲ್ವೋ, ಭಾರತೀಯ ಕ್ರಿಕೆಟ್ ತಂಡ ಮುನ್ನಡೆಸಿದ ಈ ಮೂವರ ಮಧ್ಯೆ ಸಾಮ್ಯತೆಯಿದೆ. 14 ವರ್ಷದ ಹಿಂದೆ ಗಂಗೂಲಿ ಕ್ಯಾಪ್ಟನ್ಸಿ ಬಿಟ್ಟಿದ್ದಾರೆ. ಧೋನಿ ಈಗ ಬರೀ ಪ್ಲೇಯರ್. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇನ್ನೂ ಭಾರತ ಬೆಳಗಬೇಕಿದೆ, ಬೆಳಗುತ್ತೆ. ಆದರೆ, ಈ ಮೂವರಿಗೂ 183 ಸಂಖ್ಯೆ ಜೀವನದಲ್ಲಿ ಜೊತೆಯಾಗಿರುತ್ತೆ. ಯಾಕಂದ್ರೇ, ಏಕದಿನ ಪಂದ್ಯದಲ್ಲಿ ಈ ತ್ರಿಮೂರ್ತಿಗಳ ಗರಿಷ್ಠ ವೈಯಕ್ತಿಕ ಮೊತ್ತ 183.
ಕೃಪೆ : ಟ್ವಿಟರ್... ಮಹೇಂದ್ರ ಸಿಂಗ್ ಧೋನಿ ಸಿಂಹಳೀಯರ ವಿರುದ್ಧವೇ ದಾದಾ-ಧೋನಿ ಘರ್ಜಿಸಿ ಗೆದ್ದರು!
ಇದು ಕಾಕತಾಳೀಯ ಅಷ್ಟೇ.. ಸೌರವ್ ಗಂಗೂಲಿ 1999ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿ 183ರನ್ ಪೇರಿಸಿದ್ದರು. ರಾಹುಲ್ ದ್ರಾವಿಡ್ ಜತೆಗೆ ಇಂಗ್ಲೆಂಡ್‌ನ ಟೌಂಟನ್‌ನಲ್ಲಿ ಆಡಿದ ಆ ಪಂದ್ಯದಲ್ಲಿ ಶ್ರೀಲಂಕಾವನ್ನ 157ರನ್‌ಗಳಿಂದ ಭಾರತ ಬಗ್ಗುಬಡಿದಿತ್ತು. 2005ರಲ್ಲಿ ಜೈಪುರದಲ್ಲಿ ನಡೆದಿದ್ದ ಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಬೌಂಡರಿ, ಸಿಕ್ಸರ್‌ಗಳ ಪ್ರವಾಹ ಹರಿಸಿ ವೈಯಕ್ತಿಕ 183 ರನ್ ಗಳಿಸಿದ್ದರು. ಚೇಸ್ ಮಾಡಿ 300 ಗಡಿ ದಾಡಿದ್ದ ಟೀಂ ಇಂಡಿಯಾ ಆ ಪಂದ್ಯವನ್ನ 6 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಅಮೋಘ ಬ್ಯಾಟಿಂಗ್ ಲಯ ಹೊಂದಿದ್ದ ಧೋನಿಯಿಂದಾಗಿ ಟೀಂ ಇಂಡಿಯಾ ಆ ಸರಣಿಯನ್ನ 6-1ರಿಂದ ಗೆದ್ದಿತ್ತು.
ಕೃಪೆ : ಟ್ವಿಟರ್... ಮಹೇಂದ್ರ ಸಿಂಗ್ ಧೋನಿ ವಿರಾಟ್ ಕೊಹ್ಲಿ ವಿಶ್ವಕ್ರಿಕೆಟ್‌ನಲ್ಲಿ ಜಗದೇಕ ವೀರ, ಕಟ್ಟಿ ಹಾಕೋರಿಲ್ಲ!
2012ರ ಏಷಿಯಾ ಕಪ್‌ನಲ್ಲಿ ಪಾಕ್ 330ರನ್ ಟಾರ್ಗೆಟ್‌ನ ಭಾರತಕ್ಕೆ ನೀಡಿತ್ತು. ಅವತ್ತು ವಿರಾಟ್ ಕೊಹ್ಲಿ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಮೈದಾನದ ಅಷ್ಟೂ ದಿಕ್ಕುಗಳಿಗೂ ಚೆಂಡನ್ನು ಅಟ್ಟಿದ್ದ ದಿಲ್ಲಿವಾಲಾ 183ರನ್ ಗಳಿಸಿದ್ದರು. ಹಾಗೇ ಟೀಂ ಇಂಡಿಯಾ ಇನ್ನೂ 13 ಬಾಲ್ ಉಳಿಸಿ ಪಂದ್ಯವನ್ನ 6 ವಿಕೆಟ್‌ಗಳಿಂದ ಗೆದ್ದು ಕೇಕೆ ಹಾಕಿತ್ತು. ಆ ಏಷಿಯಾ ಕಪ್‌ನಲ್ಲಿ ತೋರಿದ ಪರ್ಫಾಮೆನ್ಸ್‌ನಿಂದಾಗಿ ವಿರಾಟ್ ಕೊಹ್ಲಿ ಜಗದೇಕ ವೀರನಂತೆ ವಿಶ್ವಕ್ರಿಕೆಟ್‌ನಲ್ಲಿ ಮೆರೆಯುತ್ತಿದ್ದಾರೆ.
ಕೃಪೆ : ಟ್ವಿಟರ್... ಸೌರವ್ ಗಂಗೂಲಿ ದಿಲ್ಲಾವಾಲಾಗೆ ಇನ್ನೂ ಚಾನ್ಸ್ ಇದೆ, ಅದೇನೂ ಅಸಾಧ್ಯವೇನಲ್ಲ!
ಈ ಮೂವರು ದಿಗ್ಗಜರು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಒಂದೊಂದೇ ಗಟ್ಟಿ ಹೆಜ್ಜೆಯನ್ನಿರಿಸಿ ಖ್ಯಾತಿ ಗಳಿಸುತ್ತಾ ಬಂದವರು. ಗಂಗೂಲಿ, ಧೋನಿ ಮತ್ತು ಕೊಹ್ಲಿ 183 ಗರಿಷ್ಠ ಸ್ಕೋರ್ ಮಾಡಲು ಸಾಕಷ್ಟು ಕಾಲ ತೆಗೆದುಕೊಂಡಿದ್ದಾರೆ. ತಮ್ಮದೇಯಾದ ಮೈಲುಗಲ್ಲು ಸ್ಥಾಪಿಸಿದ್ದಾರೆ. ಗಂಗೂಲಿ ಮತ್ತು ಧೋನಿ ತಮ್ಮ ಈ ವೈಯಕ್ತಿಕ ಸ್ಕೋರ್ ದಾಖಲೆ ಮುರಿಯಲಾಗಲಿಕ್ಕಿಲ್ಲ. ಆದರೆ, ವಿರಾಟ್ ಕೊಹ್ಲಿ ವೈಯಕ್ತಿಕ ಸ್ಕೋರ್ 183 ಅಳಿಸಿ ಹಾಕಲು ಇನ್ನೂ ಸಾಕಷ್ಟು ಅವಕಾಶಗಳಿವೆ. ಅದು ಕೊಹ್ಲಿ ರೀತಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮೆನ್‌ಗೆ ಅಸಾಧ್ಯವೇನಲ್ಲ.
ಕೃಪೆ : ಟ್ವಿಟರ್... ವಿರಾಟ್ ಕೊಹ್ಲಿ