ನವದೆಹಲಿ:ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ತಂಡ 195ಕ್ಕೆ ಸರ್ವಪತನ ಕಂಡಿದ್ದು, ಕುತೂಹಲಕಾರಿ ಸಂಗತಿ ಎಂದರೆ 17 ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾದ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಎಂಸಿಜೆ ಮೈದಾನದಲ್ಲಿ ಆಸೀಸ್ ವಿರುದ್ಧ 195 ರನ್ ಗಳಿಸಿದ್ದರು.
2003-04ರಲ್ಲಿ ಭಾರತ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಇದೇ ಡಿಸೆಂಬರ್ 26ರಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೆಹ್ವಾಗ್, ಆಕಾಶ್ ಚೋಪ್ರಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಆಸೀಸ್ ಬೌಲರ್ಗಳ ಬೆವರಿಳಿಸಿದ್ದ ಸೆಹ್ವಾಗ್ 233 ಎಸೆತಗಳಲ್ಲಿ 25 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ 195 ರನ್ ಸಿಡಿಸಿ 5 ರನ್ಗಳಿಂದ ದ್ವಿಶತಕ ವಂಚಿತರಾಗಿದ್ದರು.
ಸೆಹ್ವಾಗ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್ ಗಳಿಸಿತ್ತು. ಆದರೆ ಆಸೀಸ್ ಪರ ಅಬ್ಬರಿಸಿದ್ದ ಪಾಂಟಿಂಗ್ ಕಾಂಗರೂಗಳಿಗೆ ಮೇಲುಗೈ ತಂದುಕೊಟ್ಟಿದ್ದರು. ಕ್ರೀಸ್‌ನಲ್ಲಿ 590 ನಿಮಿಷ ಕಳೆದಿದ್ದರಿಂದ ಪಾಂಟಿಂಗ್ 257 ರನ್ ಗಳಿಸಿದ್ದರು. ಓಪನರ್ ಮ್ಯಾಥ್ಯೂ ಹೇಡನ್ ಸಹ 136 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 558 ರನ್ ಕಲೆಹಾಕಿತ್ತು.