ಮುಂಬೈ:ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 2021ರ ಆವೃತ್ತಿ ಬರೋಬ್ಬರಿ 120 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ.
ಮುಂಚೂಣಿ ಕ್ರೀಡಾ ವೆಬ್ಸೈಟ್ ಪ್ರಕಾರ, ಈ ವರ್ಷದ ಐಪಿಎಲ್ ಆವೃತ್ತಿ ಸುಮಾರು 24ರಿಂದ 25 ಚಾನೆಲ್ಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಡಿಸ್ನಿ ಹಾಟ್ಸ್ಟಾರ್ನಲ್ಲೂ ಪ್ರಸಾರವಾಗಲಿದೆ. ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಪಂದ್ಯಗಳನ್ನು ವೀಕ್ಷಿಕರು ಎಂಜಾಯ್ ಮಾಡಬಹುದಾಗಿದೆ.
ಐಪಿಎಲ್ ಭಾರತದಲ್ಲಷ್ಟೇ ಅಲ್ಲದೆ, ಸುಮಾರು 120 ರಾಷ್ಟ್ರಗಳಲ್ಲಿನ ವಿವಿಧ ಚಾನೆಲ್ಗಳಲ್ಲಿ ಟೆಲಿಕಾಸ್ಟ್ ಆಗಲಿದೆ.