ಮುಂಬೈ:ಬಹು ನಿರೀಕ್ಷಿತ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನ ವೇಳಾಪಟ್ಟಿ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿಚಾರವನ್ನು ತಿಳಿಸಿದ್ದಾರೆ ಎನ್ನಲಾಗ್ತಿದೆ.
ಕಳೆದ ಒಂದು ವಾರದಿಂದ ಅಭಿಮಾನಿಗಳು ಹಾಗೂ ವಿವಿಧ ಪ್ರಾಂಚೈಸಿಗಳು ಐಪಿಎಲ್ 2020ಯ ವೇಳಾಪಟ್ಟಿಯನ್ನು ಬೇಗ ಘೋಷಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದ್ದವು. 13ನೇ ಆವೃತ್ತಿಯ ಲೀಗ್ಗೆ 16 ದಿನಗಳು ಮಾತ್ರ ಉಳಿದಿವೆ. ಇದೀಗ ಖಾಸಗಿ ಮಾಧ್ಯಮಕ್ಕೆ ಬಿಸಿಸಿಐ ಅಧ್ಯಕ್ಷ ನೀಡಿರುವ ಹೇಳಿಕೆ ಪ್ರಕಾರ ಶುಕ್ರವಾರ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಆಗುವ ಸಾಧ್ಯತೆಯಿದೆ.