ಕರ್ನಾಟಕ

karnataka

By

Published : Sep 14, 2020, 10:34 PM IST

ETV Bharat / sports

ಚೀನಾ-ಪಾಕಿಸ್ತಾನ ಬಿಟ್ಟು 120 ದೇಶಗಳಲ್ಲಿ ಪ್ರಸಾರವಾಗಲಿದೆ ಐಪಿಎಲ್ 2020​

ಸೆಪ್ಟೆಂಬರ್​ 19ರಿಂದ ಐಪಿಎಲ್​ ಆರಂಗೊಳ್ಳಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಸೆಣೆಸಾಡಲಿವೆ. ಟೂರ್ನಿಯ ಅಧಿಕೃತ ಪ್ರಸಾರ ಹಕ್ಕನ್ನು ಪಡೆದಿರುವ ಸ್ಟಾರ್​ ಸ್ಪೋರ್ಟ್ಸ್​ ವಿವಿಧ ದೇಶಗಳ ಚಾನೆಲ್​ಗಳೊಂದಿಗೆ ನೇರ ಪ್ರಸಾರವನ್ನು ಹಂಚಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಐಪಿಎಲ್ 2020​
ಐಪಿಎಲ್ 2020​

ದುಬೈ:ಕೋಟ್ಯಂತರ ಮಂದಿ ಉತ್ಸಾಹಭರಿತರಾಗಿ ಕಾಯುತ್ತ ಕುಳಿತಿರುವ 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್ ಆರಂಭಗೊಳ್ಳಲು ಕೇವಲ 5 ದಿನಗಳು ಬಾಕಿಯುಳಿದಿದೆ. ಈ ಮಿಲಿಯನ್ ಡಾಲರ್​ ಟೂರ್ನಿ ಸುಮಾರು 120 ದೇಶಗಳಲ್ಲಿ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್​ 19ರಿಂದ ಐಪಿಎಲ್​ ಆರಂಭಗೊಳ್ಳಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಸೆಣೆಸಾಡಲಿವೆ. ಟೂರ್ನಿಯ ಅಧಿಕೃತ ಪ್ರಸಾರ ಹಕ್ಕನ್ನು ಪಡೆದಿರುವ ಸ್ಟಾರ್​ ಸ್ಪೋರ್ಟ್ಸ್​ ವಿವಿಧ ದೇಶಗಳ ಚಾನೆಲ್​ಗಳೊಂದಿಗೆ ನೇರ ಪ್ರಸಾರವನ್ನು ಹಂಚಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಕೋವಿಡ್​ 19 ಭೀತಿಯಿಂದ ಮುಚ್ಚಿದ ಕ್ರೀಡಾಂಗಣದಲ್ಲಿ ಈ ಬಾರಿ ಟೂರ್ನಿ ಅಯೋಜನೆಗೊಳ್ಳುತ್ತಿರುವುದಿರಿಂದ ಟಿವಿಯಲ್ಲೇ ಬೌಂಡರಿ ಸಿಕ್ಸರ್​ಗಳ ಹಬ್ಬನ್ನು ಕಣ್ತುಂಬಿಕೊಳ್ಳಬೇಕಿದೆ. ಆಶ್ಚರ್ಯವೆಂದರೆ 120 ದೇಶಗಳಲ್ಲಿ ನೇರಪ್ರಸಾರವಾಗುವ ವಿಶ್ವದ ನಂಬರ್​ ಒನ್ ಟಿ20 ಟೂರ್ನಿ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಪ್ರಸಾರವಾಗುತ್ತಿಲ್ಲ. ಇದುವರೆಗೂ ಅಲ್ಲಿನ ಯಾವುದೇ ಚಾನೆಲ್​ಗಳು ನೇರಪ್ರಸಾರದ ಹಕ್ಕನ್ನು ಪಡೆಯಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ ಭಾರತದಲ್ಲಿ ಸ್ಟಾರ್​ ಸ್ಫೋರ್ಟ್ಸ್​ ಮತ್ತು ಹಾಟ್​ ಸ್ಟಾರ್​ ಐಪಿಎಲ್​ ಪ್ರಸಾರ ಮಾಡಲಿದೆ. ಕನ್ನಡ, ತಮಿಳು,ತೆಲುಗು, ಹಿಂದಿ, ಮಲೆಯಾಳಂ, ಮರಾಠಿ ಹಾಗೂ ಬೆಂಗಾಲಿ ಭಾಷೆಗಳಲ್ಲಿ ಸ್ಟಾರ್​ ಸ್ಪೋರ್ಟ್ಸ್​ ಪ್ರಸಾರ ಮಾಡಲಿದೆ.

ವಿವಿಧ ದೇಶಗಳಲ್ಲಿ ಐಪಿಎಲ್ ಪ್ರಸಾರ ಮಾಡುವ ಚಾನೆಲ್​ಗಳ ವಿವರ

  • ಇಂಗ್ಲೆಂಡ್​ ಮತ್ತು ಐರ್ಲೆಂಡ್​ನಲ್ಲಿ: ಸ್ಕೈ ಸ್ಪೋರ್ಟ್ಸ್​
  • ಅಮೆರಿಕ ಮತ್ತು ಕೆನಡಾದಲ್ಲಿ:ವಿಲ್ಲೋ ಟಿವಿ
  • ದಕ್ಷಿಣ ಆಫ್ರಿಕಾ : ಸೂಪರ್ ಸ್ಫೋರ್ಟ್ಸ್​
  • ಮಧ್ಯ-ಪ್ರಾಚ್ಯ ಮತ್ತು ಉತ್ತರ ಆಫ್ರಿಕಾಗಳಲ್ಲಿ : ಬೈನ್ ಸ್ಫೋರ್ಟ್​
  • ಉತ್ತರ ಅಮೇರಿಕ, ಯುರೋಪ್​, ಮಲೇಷ್ಯಾ, ಸಿಂಗಾಪುರ ಒಳಗೊಂಡ ಆಗ್ನೇಯ ಏಷ್ಯಾ ರಾಷ್ಟ್ರಗಳು: ಯುಪ್​ ಟಿವಿ
  • ಆಸ್ಟ್ರೇಲಿಯಾದ: ಫಾಕ್ಸ್​ ಸ್ಫೋರ್ಟ್ಸ್​ ,ಕಯೊ ಸ್ಪೋರ್ಟ್ಸ್​
  • ನ್ಯೂಜಿಲ್ಯಾಂಡ್​: ಸ್ಕೈ ಸ್ಫೊರ್ಟ್ಸ್
  • ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ: ಸ್ಟಾರ್​ ಸ್ಫೊರ್ಟ್ಸ್​

ABOUT THE AUTHOR

...view details