ಹೈದರಾಬಾದ್:14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ನಾಳೆ ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ 8 ಫ್ರಾಂಚೈಸಿಗಳು ಇದರಲ್ಲಿ ಭಾಗಿಯಾಗಿ ತಮಗೆ ಅಗತ್ಯವಿರುವ ಪ್ಲೇಯರ್ಸ್ ಖರೀದಿ ಮಾಡುವ ಯೋಜನೆ ಹಾಕಿಕೊಂಡಿವೆ. ಇದರ ಮಧ್ಯೆ ಈ ಹಿಂದೆ ನಡೆದ ಬಿಡ್ಡಿಂಗ್ನಲ್ಲಿ ಈ ಕೆಳಗಿನ 10 ಪ್ಲೇಯರ್ಸ್ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದರು.
1. ಯುವರಾಜ್ ಸಿಂಗ್: 16 ಕೋಟಿ ರೂ. (ಡೆಲ್ಲಿ ಡೇರ್ಡೆವಿಲ್ಸ್ 2015)
2015ರಲ್ಲಿ ಯುವರಾಜ್ ಸಿಂಗ್ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿ ದಾಖಲೆ ನಿರ್ಮಿಸಿದ್ದರು. ಡೆಲ್ಲಿ ತಂಡ ಬರೋಬ್ಬರಿ 16 ಕೋಟಿ ರೂ. ನೀಡಿ ಇವರನ್ನು ಖರೀದಿ ಮಾಡಿತ್ತು. ಆದರೆ ಈ ವೇಳೆ ಯುವಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. 14 ಪಂದ್ಯಗಳಿಂದ 248 ರನ್ ಗಳಿಸಿದ್ದು, ಇದರಲ್ಲಿ ಎರಡು ಅರ್ಧಶತಕ ಸೇರಿಕೊಂಡಿದ್ದವು.
2. ಪ್ಯಾಟ್ ಕುಮ್ಮಿನ್ಸ್: 15.5 ಕೋಟಿ ರೂ. (ಕೋಲ್ಕತ್ತಾ ನೈಟ್ ರೈಡರ್ಸ್ 2020)
ಆಸ್ಟ್ರೇಲಿಯಾದ ವೇಗದ ಬೌಲರ್ಗೆ 2020ರ ಬಿಡ್ಡಿಂಗ್ನಲ್ಲಿ ಕೋಲ್ಕತ್ತಾ ತಂಡ 15.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಜತೆಗೆ ಇಷ್ಟೊಂದು ಹಣ ನೀಡಿ ಖರೀದಿ ಮಾಡಿದ ವಿದೇಶಿ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದರು. ಜತೆಗೆ ಬೆನ್ ಸ್ಟೋಕ್ಸ್ ದಾಖಲೆ ಬ್ರೇಕ್ ಮಾಡಿದ್ದರು.
3. ಬೆನ್ ಸ್ಟೋಕ್ಸ್: 14.5 ಕೋಟಿ ರೂ. ( ರೈಸಿಂಗ್ ಪುಣೆ ಸೂಪರ್ಜೈಂಟ್ಸ್ 2017)
2017ರಲ್ಲಿ ಬರೋಬ್ಬರಿ 14.5 ಕೋಟಿ ರೂ.ಗೆ ಸೇಲ್ ಆಗಿದ್ದ ಬೆನ್ ಸ್ಟೋಕ್ಸ್, ಐಪಿಎಲ್ ಹರಾಜು ಪ್ರಕ್ರಿಯೆ ಐತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಹರಾಜುಗೊಂಡ ವಿದೇಶಿ ಪ್ಲೇಯರ್ ಆಗಿದ್ದರು.
4.ಯುವರಾಜ್ ಸಿಂಗ್: 14 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು 2014)
2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುವಿ 2014ರಲ್ಲಿ ಮತ್ತೊಮ್ಮೆ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದರು. 2014ರಲ್ಲಿ ರಾಯಲ್ ಚಾಲೆಂಜರ್ಸ್ 14 ಕೋಟಿ ರೂ. ನೀಡಿ ಇವರನ್ನು ಖರೀದಿ ಮಾಡಿತ್ತು.
5. ಬೆನ್ ಸ್ಟೋಕ್ಸ್: 12.5 ಕೋಟಿ ರೂ. (ರಾಜಸ್ಥಾನ ರಾಯಲ್ಸ್ 2018)
ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ 2018ರಲ್ಲಿ ಮತ್ತೊಮ್ಮೆ ಹೆಚ್ಚಿನ ಮೊತ್ತಕ್ಕೆ ಬಿಕರಿಗೊಂಡಿದ್ದರು. ರಾಜಸ್ಥಾನ ರಾಯಲ್ಸ್ 2018ರಲ್ಲಿ 12.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.