ಕರ್ನಾಟಕ

karnataka

ETV Bharat / sports

ಉಗ್ರರ ದಾಳಿಗೆ ಬೆದರಿದ ಲಂಕಾ ಟೀಂ​​... ಪಾಕ್​ಗೆ ಹೋಗಲ್ವಂತೆ ಮಲಿಂಗಾ, ಮ್ಯಾಥ್ಯೂಸ್​​ ಸೇರಿ 10 ಪ್ಲೇಯರ್ಸ್​ - ಶ್ರೀಲಂಕಾ ಕ್ರಿಕೆಟ್​ ಪ್ಲೇಯರ್​​

ಈಗಾಗಲೇ ಶ್ರೀಲಂಕಾ ಪ್ಲೇಯರ್ಸ್​ ಮೇಲೆ ಪಾಕ್​​ನಲ್ಲಿ ದಾಳಿ ನಡೆದಿದ್ದು, ಇದರಿಂದ ಆತಂಕ ವ್ಯಕ್ತಪಡಿಸಿರುವ ಲಂಕಾ ತಂಡ 10 ಪ್ರಮುಖ ಪ್ಲೇಯರ್ಸ್​ ತಾವು ಪಾಕಿಸ್ತಾನಗೆ ಕ್ರಿಕೆಟ್​ ಆಡುವುದಕ್ಕೆ ತೆರಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಶ್ರೀಲಂಕಾ ಕ್ರಿಕೆಟ್​ ತಂಡ

By

Published : Sep 9, 2019, 9:04 PM IST

ಕೊಲಂಬೊ: 2009ರಲ್ಲಿ ಪಾಕ್​ ಪ್ರವಾಸದಲ್ಲಿದ್ದ ಶ್ರೀಲಂಕಾ ಕ್ರಿಕೆಟ್​​ ತಂಡದ ಮೇಲೆ ಅಲ್ಲಿನ ಭಯೋತ್ಪಾದಕರು ದಾಳಿ ನಡೆಸಿದರು. ದಾಳಿಯಲ್ಲಿ ಆರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಸ್ಥಳೀಯರು ಸಾವನ್ನಪ್ಪಿದ್ರೆ, ಕೆಲ ಲಂಕಾ ಪ್ಲೇಯರ್ಸ್​​ ಕೂಡ ಗಾಯಗೊಂಡಿದ್ದರು.

ಘಟನೆ ನಡೆದ ಬಳಿಕ ಶ್ರೀಲಂಕಾ ಇದೀಗ ಮತ್ತೊಮ್ಮೆ ಪಾಕ್​ಗೆ ಪ್ರಯಾಣ ಬೆಳೆಸಲು ಸಜ್ಜಾಗಿತ್ತು. ಇದರ ಮಧ್ಯೆ ಲಂಕಾ ಕ್ರಿಕೆಟ್​ ತಂಡಕ್ಕೆ ಆಯ್ಕೆಗೊಂಡಿದ್ದ 10 ಪ್ಲೇಯರ್ಸ್​ ತಾವು ಪಾಕ್​ ಪ್ರಯಾಣ ಬೆಳೆಸುವುದಿಲ್ಲ ಎಂದಿದ್ದಾರೆ. ಅಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪ್ಲೇಯರ್​​ ಯಾವುದೇ ಕಾರಣಕ್ಕೂ ತಾವು ಪಾಕ್​ಗೆ ಪ್ರಯಾಣ ಬೆಳೆಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಶ್ರೀಲಂಕಾ ತಂಡದ ಮುಖ್ಯ ಪ್ಲೇಯರ್​ ಆದ ನಿರೋಷನ್ ಡಿಕ್ವೆಲ್ಲಾ,ಕುಸಲ್ ಜಾನಿತ್ ಪೆರೆರಾ,ಧನಂಜಯ ಡಿ ಸಿಲ್ವಾ,ಥಿಸರಾ ಪೆರೆರಾ,ಅಕಿಲಾ ಧನಂಜಯ,ಲಸಿತ್ ಮಾಲಿಂಗ,ಏಂಜೆಲೊ ಮ್ಯಾಥ್ಯೂಸ್​​,ಸುರಂಗ ಲಕ್ಮಲ್​​, ದಿನೇಶ್ ಚಂಡಿಮಾಲ್ ಹಾಗೂ ದಿಮುತ್ ಕರುಣರತ್ನ ಪ್ರವಾಸಿದಿಂದ ಹೊರಗೆ ಉಳಿಯಲು ನಿರ್ಧರಿಸಿದ್ದಾರೆ.

ಪಾಕ್​​ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಕೆಲ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲು ಶ್ರೀಲಂಕಾ ಕ್ರಿಕೆಟ್​​ ತಂಡ ಪಾಕ್​ಗೆ ಇದೇ ತಿಂಗಳು ಪ್ರಯಾಣ ಬೆಳೆಸಬೇಕಾಗಿತ್ತು. ಸೆಪ್ಟೆಂಬರ್​​ 27ರಂದು ಮೊದಲ ಏಕದಿನ, ಸೆಪ್ಟಂಬರ್​​ 29ರಂದು ಎರಡನೇ ಏಕದಿನ ಹಾಗೂ ಅಕ್ಟೋಬರ್​​​ 2ರಂದು ಮೂರನೇ ಏಕದಿನ ಹಾಗೂ ಅಕ್ಟೋಬರ್​​​ 5ರಂದು ಮೊದಲ ಟಿ-20 ಪಂದ್ಯದಲ್ಲಿ ಲಂಕಾ ತಂಡ ಭಾಗಿಯಾಗಬೇಕಾಗಿತ್ತು. ಎಲ್ಲ ಪಂದ್ಯಗಳು ಕರಾಚಿ ಹಾಗೂ ಲಾಹೋರ್​​ನಲ್ಲಿ ನಡೆಯಲು ವೇಳಾಪಟ್ಟಿ ಸಹ ಫೈನಲ್​ ಆಗಿದೆ.

ಒಂದು ಬಾರಿ ಉಗ್ರರ ದಾಳಿಯಾದ್ರೂ ಡೋಂಟ್​ ಕೇರ್​... ಮತ್ತೆ ಪಾಕ್​ ಅಂಗಳದಲ್ಲಿ ಕ್ರಿಕೆಟ್​ ಆಡಲಿದೆ ಲಂಕಾ ತಂಡ

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಲಾಹೋರ್​​ನ ಗಡಾಫಿ ಕ್ರೀಡಾಂಗಣದ ಹೊರಗೆ ದಾಳಿ ನಡೆದಿತ್ತು. ಇದಾದ ಬಳಿಕ ಪಾಕ್​ ತನ್ನ ನೆಲದಲ್ಲಿ ಕ್ರಿಕೆಟ್​ ನಡೆಸಲು ಅನೇಕ ಸಲ ಹರಸಾಹಸ ಪಟ್ಟಿದೆ. 2015ರಲ್ಲಿ ಜಿಂಬಾಬ್ವೆ,2017ರಲ್ಲಿ ವಿಶ್ವ XI, 2017ರಲ್ಲೇ ಶ್ರೀಲಂಕಾ ಹಾಗೂ 2018ರಲ್ಲಿ ವೆಸ್ಟ್​ ಇಂಡೀಸ್​ ತಂಡ ಪಾಕ್​ಗೆ ಪ್ರಯಾಣ ಬೆಳೆಸಿ ಕ್ರಿಕೆಟ್​ ಆಡಿವೆ. ಆದರೆ ಭಾರತ,ದಕ್ಷಿಣ ಆಫ್ರಿಕಾ,ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್​,ಇಂಗ್ಲೆಂಡ್​ನಂತಹ ಬಲಿಷ್ಠ ತಂಡಗಳು ಇಲ್ಲಿಗೆ ಪ್ರಯಾಣ ಬೆಳೆಸಿಲ್ಲ.

ABOUT THE AUTHOR

...view details