ಹೈದರಾಬಾದ್: ರಾಂಚಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿರುವ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನಿದ್ದೆ ಮಾಡಿದ್ದು ಸಖತ್ ಟ್ರೋಲ್ಗೆ ಗುರಿಯಾಗಿದ್ದಾರೆ.
ಒಂದೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ತರಬೇತುದಾರ ರವಿಶಾಸ್ತ್ರಿ ನಿದ್ದೆ ಮಾಡುತ್ತಿದ್ದರು. ಇದನ್ನ ಕಂಡ ನೆಟ್ಟಿಗರು ಟೀಂ ಇಂಡಿಯಾ ಕೋಚ್ ಕಾಲೆಳೆದಿದ್ದಾರೆ.
ರವಿಶಾಸ್ತ್ರಿ ಪ್ರಪಂಚದ ಅತ್ಯಂತ ಉತ್ತಮವಾದ ಕೆಲಸ ಹೊಂದಿದ್ದಾರೆ. ಚನ್ನಾಗಿ ಕುಡಿಯುತ್ತಾರೆ, ಕಚೇರಿ ಸಮಯದಲ್ಲಿ ಚಿಕ್ಕದೊಂದು ನಿದ್ರೆ ಮಾಡುತ್ತಾರೆ. ಸಂಬಳ ಪಡೆಯುತ್ತಾರೆ ಎಂದು ವ್ಯಕ್ತಿಯೋರ್ವ ಟ್ವೀಟ್ ಮಾಡಿದ್ದಾನೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮತ್ತೊಬ್ಬರು ಒಂದು ವರ್ಷಕ್ಕೆ 10 ಕೋಟಿ ಸಂಬಳ ಪಡೆಯುವುದು ನಿದ್ರೆ ಮಾಡೋದಕ್ಕಾ ಎಂದು ರವಿಶಾಸ್ತ್ರಿ ಹಿಂದೆ ಕುಳಿತಿರುವ ಶುಬ್ಮನ್ ಗಿಲ್ ಯೋಚಿಸುತ್ತಿದ್ದಾರೆ ಎಂದಿದ್ದಾರೆ.
ಸದ್ಯ ಜಾಲತಾಣದಲ್ಲಿ ರವಿಶಾಸ್ತ್ರಿ ನಿದ್ರೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಟ್ವಿಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.