ಜಂಟಲ್ಮನ್ ಕ್ರೀಡೆ ಎಂದೇ ಹೆಸರಾದ ಕ್ರಿಕೆಟ್ನಲ್ಲಿ ಕ್ರೀಡಾಸ್ಫೂರ್ತಿ ಮೆರೆಯುವ ಸನ್ನಿವೇಶಗಳು ನಡೆಯುತ್ತಿರುತ್ತವೆ. ಈಗ ಅಂಥದ್ದೇ ಘಟನೆಗೆ ನೇಪಾಳ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಸಾಕ್ಷಿಯಾಯಿತು.
ಓಮನ್ ಕ್ವಾಡ್ರಾಂಗುಲರ್ ಸರಣಿಯ ಪಂದ್ಯಗಳ ಭಾಗವಾಗಿ ಮಸ್ಕತ್ನ ಅಲ್-ಅಲ್ಮೇರತ್ ಕ್ರೀಡಾಂಗಣದಲ್ಲಿ ಐರ್ಲೆಂಡ್ ಮತ್ತು ನೇಪಾಳ ನಡುವೆ ಟಿ20 ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ಆಟಗಾರನನ್ನು ರನ್ ಔಟ್ ಮಾಡಲು ನೇಪಾಳದ ವಿಕೆಟ್ ಕೀಪರ್‌ಗೆ ಅವಕಾಶವಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಈ ಕೆಳಗಿನ ವಿಡಿಯೋ ನೋಡಿ..
ನೇಪಾಳದ ಬೌಲರ್ ಕಮಲ್ ಸಿಂಗ್ ಐರಿ ಬೌಲಿಂಗ್ ಮಾಡಿದ್ದು, ಅದನ್ನು ಎದುರಿಸಿದ ಮಾರ್ಕ್ ಅಡೈರ್ ಒಂದು ರನ್ ಗಳಿಸಲು ಮುಂದಾಗುತ್ತಾರೆ. ಕ್ರೀಸ್ನ ಮತ್ತೊಂದು ತುದಿಯಲ್ಲಿದ್ದ ಮೆಕ್ಬ್ರಿನ್ ಅವರು ರನ್‌ಗಾಗಿ ಓಡುತ್ತಿರಬೇಕಾದರೆ, ಬೌಲರ್ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಾರೆ. ಚೆಂಡನ್ನು ತೆಗೆದುಕೊಂಡ ಕಮಲ್ ಸಿಂಗ್ ಐರಿ ತಕ್ಷಣ ವಿಕೆಟ್ ಕೀಪರ್ ಆಸೀಫ್ ಶೇಖ್ ಕೈಗೆ ಎಸೆಯುತ್ತಾರೆ. ಆದರೆ ಕೆಳಗೆ ಬಿದ್ದಿದ್ದ ಮೆಕ್ಬ್ರಿನ್ ಅವರನ್ನು ರನ್ ಔಟ್ ಮಾಡಲು ಆಸೀಫ್ ಶೇಖ್ ಮುಂದಾಗುವುದಿಲ್ಲ. ಈ ವೇಳೆ, ನಿರಾಯಾಸವಾಗಿ ನಡೆದುಕೊಂಡು ಬಂದು ಮೆಕ್ಬ್ರಿನ್ ಕ್ರೀಸ್ ತಲುಪುತ್ತಾರೆ.