ಲಂಡನ್:ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ದಿ ಹಂಡ್ರೆಡ್ಸ್ ಪಂದ್ಯಾವಳಿಯ ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿರುವ ಅವರು, ಸೌತರ್ನ್ ಬ್ರೇವ್ ತಂಡದ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ 51 ವರ್ಷದ ವಾರ್ನ್, ಲಾರ್ಡ್ಸ್ ಮೂಲದ ಕ್ರಿಕೆಟ್ ಫ್ರಾಂಚೈಸಿ ಲಂಡನ್ ಸ್ಪಿರಿಟ್ ಪುರುಷರ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂಓದಿ: ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಕ್ರೇಜ್ ಹುಟ್ಟು ಹಾಕಿದ ಯುವರಾಜ್ ಸಿಂಗ್ ಫ್ರೆಂಡ್ಶಿಪ್ ಡೇ ಪೋಸ್ಟ್
ಕೋವಿಡ್ ಪಾಸಿಟಿವ್ ದೃಢಪಟ್ಟ ಬಳಿಕ ವಾರ್ನ್ ತಂಡದಿಂದ ಪ್ರತ್ಯೇಕವಾಗಿದ್ದಾರೆ. ಆರ್ಟಿ-ಪಿಸಿಆರ್ ವರದಿಗಾಗಿ ಕಾಯುತ್ತಿದ್ದಾರೆ ಎಂದು ತಂಡದ ಮೂಲಗಳು ಹೇಳಿವೆ. ಲಂಡನ್ ಸ್ಪಿರಿಟ್ ತಂಡದಲ್ಲಿ ಕೋವಿಡ್ ದೃಢಪಟ್ಟವರಲ್ಲಿ ಶೇನ್ ವಾರ್ನ್ ಎರಡನೆಯವರಾಗಿದ್ದಾರೆ. ಲಾರ್ಡ್ಸ್ನಲ್ಲಿ ನಡೆದ ಪಂದ್ಯದಲ್ಲಿ ಸೌಥರ್ನ್ ಬ್ರೇವ್ 4 ರನ್ಗಳ ಜಯಗಳಿಸಿದೆ.