ಕರ್ನಾಟಕ

karnataka

ETV Bharat / sports

ವಾಷಿಂಗ್ಟನ್ ಸುಂದರ್​​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ - ವಾಷಿಂಗ್ಟನ್ ಸುಂದರ್​ ಆಟವನ್ನು ಪ್ರಶಂಸಿಸಿದ ಸೈನಾ ನೆಹ್ವಾಲ್

ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್​ ಬೌಲರ್​ ಆಗಿ ಹೋಗಿದ್ದ ವಾಷಿಂಗ್ಟನ್ ಸುಂದರ್, ತಂಡದಲ್ಲಿ ಗಾಯಾದಿಂದ ಕೆಲವು ಸ್ಟಾರ್ ಆಟಗಾರರು ತಂಡದಿಂದ ಹೊರಬಿದ್ದ ಕಾರಣ 4ನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆ ಪಂದ್ಯದಲ್ಲಿ ಸ್ಟೀವ್​ ಸ್ಮಿತ್ ವಿಕೆಟ್ ಸೇರಿದಂತೆ 3 ವಿಕೆಟ್ ಹಾಗೂ 62 ರನ್​ ಬಾರಿಸಿದ್ದರು. ಜೊತೆಗೆ ಠಾಕೂರ್ ಜೊತೆಗೆ 123 ರನ್​ಗಳ ನಿರ್ಣಾಯಕ ಜೊತೆಯಾಟ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವಾಷಿಂಗ್ಟನ್ ಸುಂದರ್- ಸೈನಾ ನೆಹ್ವಾಲ್
ವಾಷಿಂಗ್ಟನ್ ಸುಂದರ್- ಸೈನಾ ನೆಹ್ವಾಲ್

By

Published : Apr 14, 2021, 7:47 PM IST

ನವದೆಹಲಿ: ಭಾರತದ ಶಟ್ಲರ್​​ ಸ್ಟಾರ್​ ಸೈನಾ ನೆಹ್ವಾಲ್​ ತಾವೂ ಬ್ಯಾಡ್ಮಿಂಟನ್ ಜೊತೆಗೆ ಕ್ರಿಕೆಟ್​ ಆಟಕ್ಕೂ ಬಹುದೊಡ್ಡ ಅಭಿಮಾನಿಯಾಗಿದ್ದೇನೆ. ಅದರಲ್ಲೂ ಭಾರತದ ಪಂದ್ಯಗಳನ್ನು ಹೆಚ್ಚು ಆನಂದಿಸುತ್ತೇನೆ, ಇತ್ತೀಚಿನ ಆಸೀಸ್ ಪ್ರವಾಸದಲ್ಲಿ ವಾಷಿಂಗ್ಟನ್ ಸುಂದರ್​ ಅವರ ಅದ್ಭುತ ಪ್ರದರ್ಶನವನ್ನು ನಾನು ನೋಡಿದ್ದೇನೆ, ಅವರ ಆಟ ನೋಡಲು ತುಂಬಾ ಮಜಾವಾಗಿತ್ತು ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್​ ಬೌಲರ್​ ಆಗಿ ಹೋಗಿದ್ದ ವಾಷಿಂಗ್ಟನ್ ಸುಂದರ್, ತಂಡದಲ್ಲಿ ಗಾಯಾದ ಕಾರಣ ಕೆಲವು ಸ್ಟಾರ್ ಆಟಗಾರರು ತಂಡದಿಂದ ಹೊರಬಿದಿದ್ದರಿಂದ 4ನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆ ಪಂದ್ಯದಲ್ಲಿ ಸ್ಟೀವ್​ ಸ್ಮಿತ್ ವಿಕೆಟ್ ಸೇರಿದಂತೆ 3 ವಿಕೆಟ್ ಹಾಗೂ 62 ರನ್​ ಬಾರಿಸಿದ್ದರು. ಜೊತೆಗೆ ಠಾಕೂರ್ ಜೊತೆಗೆ 123 ರನ್​ಗಳ ನಿರ್ಣಾಯಕ ಜೊತೆಯಾಟ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಂತರ ಮತ್ತೆ ಇಂಗ್ಲೆಂಡ್ ಸರಣಿಯಲ್ಲೂ 96 ಗರಿಷ್ಠ ಸ್ಕೋರ್ ಸೇರಿದಂತೆ 181 ರನ್​ಗಳಿಸಿದ್ದರು. ಒಲಿಂಪಿಕ್ಸ್ ಕಂಚು ಪದಕ ವಿಜೇತೆಯಾಗಿರುವ ಸೈನಾ, ಬ್ಯಾಡ್ಮಿಂಟನ್​ ಜೊತೆಗೆ ಕ್ರಿಕೆಟ್​​​ಗೂ ನಾನು ಬಹುದೊಡ್ಡ ಅಭಿಮಾನಿ ಎಂಬುದು ಹೆಚ್ಚು ಜನರಿಗೆ ಗೊತ್ತಿಲ್ಲ, ಅದರಲ್ಲೂ ಈ ಭಾರತ ತಂಡ ಆಡುವಾಗ. ನಾನು ಇತ್ತೀಚಿನ ಭಾರತದ ಸರಣಿಯಲ್ಲಿ ವಾಷಿಂಗ್ಟನ್​ ಸುಂದರ್​ ಅವರ ಅದ್ಭುತ ಪ್ರದರ್ಶನವನ್ನು ನೋಡಿದೆ, ಅವರ ಆಟವನ್ನು ನೋಡುವುದಕ್ಕೆ ತುಂಬಾ ಮಜಾವಾಗಿತ್ತು" ಎಂದು ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್, ನಿಮ್ಮ ಈ ಮಾತುಗಳಿಗೆ ಧನ್ಯವಾದಗಳು ಸೈನಾ, ನಿಮ್ಮಿಂದ ಇಂತಹ ಸ್ಪೂರ್ತಿದಾಯಕ ಮಾತುಗಳನ್ನು ಕೇಳುವುದು ತುಂಬಾ ಉತ್ತಮ ಎನಿಸಿದೆ" ಎಂದು ಹೇಳಿದ್ದಾರೆ.

ABOUT THE AUTHOR

...view details