ಕರ್ನಾಟಕ

karnataka

ETV Bharat / sports

ವಿರಾಟ್​ ನಾಯಕತ್ವದಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾದ ವಿಶ್ವಕಪ್​ ತಂಡ: ಟೀಮ್​ನಲ್ಲಿ ನಾಲ್ವರು ಭಾರತೀಯರು

ವಿಶ್ವಕಪ್​ನ ಲೀಗ್​ ಹಂತದ ಪಂದ್ಯ ಮುಗಿದ ಬಳಿಕ ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ವಿರಾಟ್​ ಕೊಹ್ಲಿಗೆ ನಾಯಕತ್ವ ನೀಡಲಾಗಿದೆ.

Virat Kohli as captain
Virat Kohli as captain

By ETV Bharat Karnataka Team

Published : Nov 13, 2023, 6:03 PM IST

ಸಿಡ್ನಿ (ಆಸ್ಟ್ರೇಲಿಯಾ): ಕ್ರಿಕೆಟ್​ ಆಸ್ಟ್ರೇಲಿಯಾ 2023 ವಿಶ್ವಕಪ್​ನ ಲೀಗ್​ ಪಂದ್ಯಗಳು ಮುಗಿದ ಬಳಿಕ ತನ್ನ ಟೂರ್ನಿಯ ತಂಡವನ್ನು ಪ್ರಕಟಿಸಿದೆ. ಆಸಿಸ್​ ಕ್ರಿಕೆಟ್​ ಪ್ರಕಟಿಸಿರುವ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯಾದ ಮೂವರು ಆಟಗಾರರು ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಾಗಿದೆ.

2023ರ ವಿಶ್ವಕಪ್​ ಚಾಂಪಿಯನ್​ ಯಾರಾಗುತ್ತಾರೆ ಎಂಬುದು ಇನ್ನು ಮೂರು ಪಂದ್ಯಗಳ ಫಲಿತಾಂಶದ ಬಳಿಕ ತಿಳಿದು ಬರಲಿದೆ. ಈಗಾಗಲೇ ಸೆಮೀಸ್​ಗೆ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮ ತ್ತು ನ್ಯೂಜಿಲೆಂಡ್​ ತಂಡ ಆಯ್ಕೆ ಆಗಿದೆ. ನ.15,16 ರಂದು ಸೆಮೀಸ್​ ಪಂದ್ಯಗಳು ನಡೆದರೆ, 19 ರಂದು ಫೈನಲ್​ ನಡೆಯಲಿದೆ. ಈ ನಾಲ್ಕು ಟಾಪ್​ ತಂಡಗಳಿಂದ ಕ್ರಿಕೆಟ್​ ಆಸ್ಟ್ರೇಲಿಯಾ 11 ಆಟಗಾರರ ಒಂದು ತಂಡವನ್ನು ಆಯ್ಕೆ ಮಾಡಿದೆ.

ಈ ತಂಡದ ನಾಯಕರಾಗಿ ವಿರಾಟ್​ ಕೊಹ್ಲಿ ಆಯ್ಕೆ ಆಗಿದ್ದಾರೆ. 4ನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಆಡಲಿದ್ದಾರೆ. ನಡೆಯುತ್ತಿರುವ ವಿಶ್ವಕಪ್​ನಲ್ಲಿ ವಿರಾಟ್​ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಆಗಿದ್ದಾರೆ. 9 ಪಂದ್ಯಗಳಲ್ಲಿ 88.50 ಸ್ಟ್ರೈಕ್​ರೇಟ್​ನಿಂದ 99ರ ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧಶತಕ ಗಳಿಸಿ 594 ರನ್ ಕಲೆಹಾಕಿದ್ದಾರೆ.

ವಿರಾಟ್​ ಜೊತೆಗೆ ಭಾರತ ಮೂವರು ಆಟಗಾರರು ಆಯ್ಕೆ ಆಗಿದ್ದಾರೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಎಂಟನೇ ಆಟಗಾರ ಆಗಿದ್ದಾರೆ. ಜಡೇಜಾ ವಿಶ್ವಕಪ್​ನ 9 ಪಂದ್ಯಗಳಿಂದ 111 ರನ್​ ಗಳಿಸಿದ್ದು, 16 ವಿಕೆಟ್​ ಪಡೆದುಕೊಂಡಿದ್ದಾರೆ. ಮೊಹಮ್ಮದ್​ ಶಮಿ 9ನೇ ಆಟಗಾರ ಹಾಗೇ 11ನೇ ಆಟಗಾರನಾಗಿ ಜಸ್ಪ್ರೀತ್​ ಬುಮ್ರಾ ಆಯ್ಕೆ ಆಗಿದ್ದಾರೆ. ಶಮಿ ಪ್ರಸ್ತುತ ವಿಶ್ವಕಪ್​ನಲ್ಲಿ 5 ಪಂದ್ಯದಿಂದ 16 ವಿಕೆಟ್​ ಪಡೆದುಕೊಂಡಿದ್ದಾರೆ. ಬುಮ್ರಾ 9 ಪಂದ್ಯದಿಂದ 17 ವಿಕೆಟ್​ ಕಬಳಿಸಿದ್ದಲ್ಲದೇ, 3.65ರ ಎಕಾನಮಿಯಲ್ಲಿ ಬೌಲಿಂಗ್​ ಮಾಡಿದ್ದಾರೆ.

ಈ ತಂಡದಲ್ಲಿ ಆರಂಭಿಕರಾಗಿ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್​ ವಾರ್ನರ್​ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ವಿಂಟನ್ ಡಿ ಕಾಕ್ ನಡೆಯುತ್ತಿರುವ ವಿಶ್ವಕಪ್​ನಲ್ಲಿ 9 ಪಂದ್ಯಗಳನ್ನು ಆಡಿದ್ದು, 109.2 ಸ್ಟ್ರೈಕ್​ ರೇಟ್​ನಲ್ಲಿ 65.67 ಸರಾಸರಿಯಲ್ಲಿ 591 ರನ್​ ಕಲೆಹಾಕಿದ್ದಾರೆ. ಪ್ರಸ್ತುತ ವಿಶ್ವಕಪ್​ನಲ್ಲಿ ಅವರು ಅತಿ ಹೆಚ್ಚು ರನ್​ ಗಳಿಸಿದ ಎರಡನೇ ಆಟಗಾರ ಆಗಿದ್ದಾರೆ. ಅವರ ಬ್ಯಾಟ್​ನಿಂದ ಈ ವರ್ಷ 4 ಶತಕಗಳು ಬಂದಿವೆ. ಡಿ ಕಾಕ್​ ಅವರನ್ನು ಕೀಪರ್​ ಆಗಿ ಸಹ ತಂಡಕ್ಕೆ ಸೇರಿಸಿಕೊಂಡಿದೆ.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್ ನಡೆಯುತ್ತಿರುವ ವಿಶ್ವಕಪ್​ನಲ್ಲಿ 9 ಪಂದ್ಯಗಳಿಂದ 55.44 ಸರಾಸರಿಯಲ್ಲಿ 105.5 ಸ್ಟ್ರೈಕ್​ ರೇಟ್​ನಿಂದ 499 ರನ್​ ಗಳಿಸಿದ್ದಾರೆ. ಇವರ ಬ್ಯಾಟ್​ನಿಂದ ಎರಡು ಶತಕಗಳು ಬಂದಿವೆ. ಟೂರ್ನಿಯಲ್ಲಿ ಈವರೆಗೆ 5ನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಆಗಿದ್ದಾರೆ.

3ನೇ ಸ್ಥಾನಕ್ಕೆ ಕಿವೀಸ್​ನ ಉದಯೋನ್ಮುಖ ಆಟಗಾರ ರಚಿನ್​ ರವೀಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. 23 ವರ್ಷದ ಯುವ ಆಟಗಾರ ನ್ಯೂಜಿಲೆಂಡ್​ ನಾಯಕ ಕೇನ್​ ವಿಲಿಯಮ್ಸನ್​ ಅವರ ಸ್ಥಾನವನ್ನು ಅವರ ಅನುಪಸ್ಥಿತಿಯಲ್ಲಿ ತುಂಬಿದ್ದರು. 9 ಪಂದ್ಯಗಳಿಂದ 70.63 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟಿಂಗ್​ ಮಾಡಿ 565 ರನ್​ಗಳಿಸಿದರು. ಬೌಲಿಂಗ್​ ಕೂಡಾ ಮಾಡಿದ್ದು, 5 ವಿಕೆಟ್​ ಪಡೆದಿದ್ದಾರೆ.

4ನೇ ಸ್ಥಾನಕ್ಕೆ ವಿರಾಟ್​ ಕೊಹ್ಲಿಯನ್ನು ಆಯ್ಕೆ ಮಾಡಿದ್ದು, ಅಲ್ಲದೇ ತಂಡದ ನಾಯಕನನ್ನಾಗಿ ನೇಮಕ ಮಾಡಿದೆ. ನಡೆಯುತ್ತಿರುವ ವಿಶ್ವಕಪ್​ನಲ್ಲಿ ವಿರಾಟ್​ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಆಗಿದ್ದಾರೆ. 9 ಪಂದ್ಯಗಳಲ್ಲಿ 88.50 ಸ್ಟ್ರೈಕ್​ರೇಟ್​ನಿಂದ 99ರ ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧಶತಕ ಗಳಿಸಿ 594 ರನ್ ಕಲೆಹಾಕಿದ್ದಾರೆ.

ಉಳಿದಂತೆ ತಂಡದಲ್ಲಿ 5,6,7 ಸ್ಥಾನಕ್ಕೆ ಕ್ರಮವಾಗಿ ಐಡೆನ್ ಮಾರ್ಕ್ರಾಮ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್ ಇದ್ದಾರೆ. ಆಡಮ್ ಝಂಪಾ 10ನೇ ಆಟಗಾರ ಆಗಿದ್ದಾರೆ. ಹೆಚ್ಚುವರಿಯಾಗಿ ಶ್ರೀಲಂಕಾದ ದಿಲ್ಶನ್ ಮಧುಶಂಕ ಅವರನ್ನು ಬೌಲಿಂಗ್​ ಯುನಿಟ್​ಗೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಡ್ಯಾಶಿಂಗ್​ ಓಪನರ್​ ವಿರೇಂದ್ರ ಸೆಹ್ವಾಗ್​​ ಸೇರಿ ಮೂವರಿಗೆ ಐಸಿಸಿ ಹಾಲ್​ ಆಫ್​ ಫೇಮ್​ ಗೌರವ

ABOUT THE AUTHOR

...view details