ಮೆಲ್ಬೋರ್ನ್: ಕೋವಿಡ್ 19ನಿಂದ ಮುಂದೂಡಲ್ಪಟ್ಟಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ನಿಂದ ಯುಎಇನಲ್ಲಿ ನಡೆಯಲಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಕ್ರಿಕೆಟಿಗರಿಗೆ ಶ್ರೀಮಂತ ಲೀಗ್ನಲ್ಲಾಡಲು ನಿರಾಪೇಕ್ಷಣಾ ಪತ್ರ ನೀಡಿದೆ.
ಐಪಿಎಲ್ ರದ್ದಾದ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ವೇಳಾಪಟ್ಟಿಗೆ ತನ್ನೆಲ್ಲಾ ಆಟಗಾರರು ಗೌರವ ನೀಡಿ ಐಪಿಎಲ್ನಲ್ಲಿ ಆಡಬಾರದೆಂದು ತಾಕೀತು ಮಾಡಿತ್ತು. ಆದರೆ ಬಿಸಿಸಿಐ ಟಿ20 ವಿಶ್ವಕಪ್ ಅನ್ನು ಯುಎಇನಲ್ಲಿ ಆಯೋಜಿಸುವ ಮೂಲಕ ಎಲ್ಲಾ ಕ್ರಿಕೆಟ್ ಮಂಡಳಿ ತಾವಾಗಿಯೇ ಎನ್ಒಸಿ ನೀಡುವಂತೆ ಮಾಡಿದೆ.
ವಿಶ್ವಕಪ್ಗೆ ಸಿದ್ಧತೆಗೆ ಅತ್ಯುತ್ತಮ ವೇದಿಕೆಯಾಗಿದ್ದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ಗಳು ಈಗಾಗಲೇ ಎನ್ಒಸಿ ನೀಡಿವೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಭಾನುವಾರ ತನ್ನ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಕ್ಕೆ ಅನುಮತಿಸಿದೆ.