ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​​​ಗೆ ಕ್ರಿಕೆಟ್​ ಸೇರಿಸಲು ಐಒಸಿ ಸಮಿತಿಯಲ್ಲಿ ಬಹುಮತ.. ಅಕ್ಟೋಬರ್​ ಸಭೆಯಲ್ಲಿ ತೀರ್ಮಾನ - ETV Bharath Karnataka

ಇನ್ನು ಕೆಲವೇ ವರ್ಷಗಳಲ್ಲಿ ಒಲಿಂಪಿಕ್ಸ್ ನಲ್ಲೂ ಕ್ರಿಕೆಟ್ ನೋಡುವ ದಿನ ಬರಲಿದೆ. ಕ್ರಿಕೆಟ್ ಅ​ನ್ನು ಒಲಿಂಪಿಕ್ಸ್‌ಗೆ ಸೇರಿಸುವ ಕುರಿತು ಅಕ್ಟೋಬರ್‌ನಲ್ಲಿ ನಡೆಯುವ ಒಲಿಂಪಿಕ್ ಸಮಿತಿ ಸಭೆಯಲ್ಲಿ ತಿರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Cricket in Olympics
Cricket in Olympics

By ETV Bharat Karnataka Team

Published : Sep 4, 2023, 9:46 PM IST

ಹೈದರಾಬಾದ್:ಭಾರತದಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ಮತ್ತು ಹೆಚ್ಚು ಮಹತ್ವ ಪಡೆದಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್​. ಇದೀಗ​ ಕ್ರಿಕೆಟ್ ಅಭಿಮಾನಿಗಳು ಒಲಿಂಪಿಕ್ಸ್‌ಗೆ ತೆರಳುವ ಸಮಯ ಬಂದಿದೆ. 2028ರ ಒಲಿಂಪಿಕ್ಸ್‌ಗೆ ಸೇರಿಸಲು ಪರಿಗಣಿಸಲಾಗುತ್ತಿರುವ ಒಂಬತ್ತು ಕ್ರೀಡೆಗಳಲ್ಲಿ, ಕ್ರಿಕೆಟ್ ಮುಂಚೂಣಿಯಲ್ಲಿದೆ. ಕ್ರಿಕೆಟ್‌ನ ಅಪಾರ ಅಭಿಮಾನಿಗಳನ್ನು ತಮ್ಮತ್ತ ತಿರುಗಿಸುವ ಸಾಮರ್ಥ್ಯ ಹೊಂದಿರುವ ಕ್ರೀಡೆ ಎಂದು ಅದು ಕ್ರಿಕೆಟ್. ಹಾಗಾಗಿ ಒಲಿಂಪಿಕ್ ಸಮಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಅಕ್ಟೋಬರ್ 15 ಮತ್ತು 1 ರ ನಡುವೆ ಈ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳವ ಸಾಧ್ಯತೆ ಇದೆ. ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ಸ್‌ಗಾಗಿ ಸುಮಾರು 100 ಐಒಸಿ ಸದಸ್ಯರು ಮುಂಬೈನಲ್ಲಿ ಮತ ಚಲಾಯಿಸಲಿದ್ದಾರೆ. ಸೆಪ್ಟೆಂಬರ್ 8 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ಐಒಸಿ ಕಾರ್ಯಕಾರಿ ಮಂಡಳಿಯ ಸದಸ್ಯರ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ಜೊತೆಗೆ, ಒಲಿಂಪಿಕ್ಸ್‌ನಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸುವ ಕ್ರೀಡೆಗಳಲ್ಲಿ ಫ್ಲ್ಯಾಗ್ ಫುಟ್‌ಬಾಲ್, ಕರಾಟೆ, ಕಿಕ್ ಬಾಕ್ಸಿಂಗ್, ಬೇಸ್‌ಬಾಲ್ - ಸಾಫ್ಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್ ಸೇರಿವೆ.

ಒಲಿಂಪಿಕ್ಸ್‌ನಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ ಕುರಿತು ಮಾತನಾಡಿದ ಐಒಸಿಯ ಮಾರುಕಟ್ಟೆ ಮತ್ತು ಪ್ರಸಾರ ಹಕ್ಕುಗಳ ಮಾಜಿ ನಿರ್ದೇಶಕ ಮಿಚೆಲ್ ಪೇನ್, ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದರೆ, ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲವು ದೊಡ್ಡ ಟೆಕ್ ಕಂಪನಿಗಳು ಈಗಾಗಲೇ ಮೇಜರ್ ಲೀಗ್‌ನಲ್ಲಿ ಹೆಚ್ಚು ಹೂಡಿಕೆ ಮಾಡಿವೆ. ಮೇಲಾಗಿ 2032ರಲ್ಲಿ ಆಸ್ಟ್ರೇಲಿಯಾದಲ್ಲಿ ಒಲಿಂಪಿಕ್ಸ್ ನಡೆಯಲಿದ್ದು, ಅಲ್ಲಿ ಕ್ರಿಕೆಟ್ ದೊಡ್ಡ ಕ್ರೀಡೆಯಾಗಿದೆ. ಹೀಗಾಗಿ ಜನ ಪ್ರಿಯತೆಯ ಕಾರಣ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಐಒಸಿ ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಬೃಹತ್ ಕ್ರಿಕೆಟ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ನೋಡುತ್ತಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಒಲಿಂಪಿಕ್ಸ್‌ನ ಪ್ರಭಾವ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರಿದರೆ ಅಲ್ಲಿಯೂ ಅಭಿಮಾನಿಗಳನ್ನು ಸೆಳೆಯಬಹುದು. ಮತ್ತೊಂದೆಡೆ, ಭಾರತವು 2036 ರಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸಲು ಬಿಡ್ ಸಲ್ಲಿಸಲು ಆಶಿಸುತ್ತಿದೆ. ಇದು ಪ್ರಸ್ತುತ ಅದರ ಆರಂಭಿಕ ಹಂತದಲ್ಲಿದೆ. 1900 ರಲ್ಲಿ ಒಲಿಂಪಿಕ್ಸ್‌ನಲ್ಲಿ ಕೊನೆಯದಾಗಿ ಕ್ರಿಕೆಟ್ ಆಡಿಸಲಾಗಿತ್ತು. ಇದರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಚಿನ್ನದ ಪದಕಕ್ಕಾಗಿ ಹೋರಾಡಿದವು ಮತ್ತು ಬ್ರಿಟನ್ ಚಿನ್ನವನ್ನು ಗೆದ್ದಿತ್ತು.

ಇದನ್ನೂ ಓದಿ:IND vs NEP: ಸದೃಢ ಬ್ಯಾಟಿಂಗ್​ ಪ್ರದರ್ಶಿಸಿದ ನೇಪಾಳ.. ಭಾರತಕ್ಕೆ 231 ರನ್​ಗಳ ಗುರಿ

ABOUT THE AUTHOR

...view details