ವೆಸ್ಟ್ ಇಂಡೀಸ್:ಕ್ರಿಕೆಟ್ ದುನಿಯಾದಲ್ಲಿ ಹೊಸ ಹೊಸ ದಾಖಲೆ ಸೃಷ್ಟಿಯಾಗುವುದು, ಬ್ರೇಕ್ ಆಗುವುದು ಸಾಮಾನ್ಯ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಆಟಗಾರರಿಂದ ಮೂಡಿ ಬರುವ ಅತ್ಯುತ್ತಮ ಪ್ರದರ್ಶನ ಪಂದ್ಯದ ಚಿತ್ರಣವನ್ನೇ ಬದಲಿಸಿ ಬಿಡುತ್ತವೆ. ಸದ್ಯ ಅಂತಹದ್ದೊಂದು ಪ್ರದರ್ಶನ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೂಡಿ ಬಂದಿದೆ.
ಜಮೈಕಾ ತಲ್ಲವಾಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಒಡಿಯನ್ ಸ್ಮಿತ್ ಕೇವಲ 16 ಎಸೆತಗಳಲ್ಲಿ ಭರ್ಜರಿ 42 ರನ್ಗಳಿಸಿದರು. ಇದರ ಜೊತೆಗೆ ಒಂದೇ ಓವರ್ನಲ್ಲಿ ದಾಖಲೆಯ 5 ಸಿಕ್ಸರ್ ಸಿಡಿಸಿದ್ದಾರೆ. ಡೆತ್ ಓವರ್ಗಳಲ್ಲಿ ಬ್ಯಾಟ್ ಬೀಸಿದ ಒಡಿಯನ್ ಸ್ಮಿತ್ ಎದುರಾಳಿ ಬೌಲರ್ಗಳ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ಈ ಮೂಲಕ ಜಮೈಕಾ ವಿರುದ್ಧ 12 ರನ್ಗಳ ರೋಚಕ ಗೆಲುವು ದಾಖಲು ಮಾಡಿದೆ.
ಇದನ್ನೂ ಓದಿ:18 ಬೌಂಡರಿ, 4 ಸಿಕ್ಸರ್, 143 ರನ್! 11 ಎಸೆತಗಳಲ್ಲೇ 43 ರನ್: ಹರ್ಮನ್ ಕೌರ್ ಬ್ಯಾಟಿಂಗ್ ವೈಭವ!
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಅಮೆಜಾನ್ ತಂಡ ಆರಂಭದ 15 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 97ರನ್ಗಳಿಕೆ ಮಾಡಿತ್ತು. ಇದಾದ ಬಳಿಕ ಮೈದಾನಕ್ಕಿಳಿದ ಒಡಿಯನ್ ಸ್ಮಿತ್ ಪಂದ್ಯದ ಚಿತ್ರಣ ಸಂಪೂರ್ಣವಾಗಿ ಬದಲಿಸಿದರು. 18ನೇ ಓವರ್ನಲ್ಲಿ ಬರೋಬ್ಬರಿ 5 ಸಿಕ್ಸರ್ ಸಿಡಿಸಿದರು. ಹೀಗಾಗಿ, ಕೊನೆಯ ಮೂರು ಓವರ್ಗಳಲ್ಲಿ ತಂಡಕ್ಕೆ 74ರನ್ ಹರಿದು ಬಂದವು. ಹೀಗಾಗಿ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ಗಳಿಸಿತು. 179 ರನ್ಗಳ ಗುರಿ ಬೆನ್ನತ್ತಿದ ಜಮೈಕಾ ಉತ್ತಮ ಆರಂಭದ ಹೊರತಾಗಿ ಸಹ 166ರನ್ ಮಾತ್ರ ಗಳಿಕೆ ಮಾಡಿತು. ಹೀಗಾಗಿ, 12ರನ್ಗಳ ಸೋಲು ಕಂಡಿದೆ. ಕೊನೆ ಓವರ್ ಮಾಡಿದ ಒಡಿಯನ್ ಸ್ಮಿತ್ ಎರಡು ವಿಕೆಟ್ ಪಡೆದುಕೊಂಡು ಮಿಂಚಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.