ಕರ್ನಾಟಕ

karnataka

ETV Bharat / sports

ಕೋವಿಡ್​ 19 ಪಾಸಿಟಿವ್ ಬಂದಾಗ ಕಳೆದ ದಿನಗಳನ್ನು ನೆನೆದು ಕಣ್ಣೀರಿಟ್ಟ ಕೆಕೆಆರ್​ ಬ್ಯಾಟ್ಸ್​ಮನ್ - ನ್ಯೂಜಿಲ್ಯಾಂಡ್ ವಿಕೆಟ್ ಕೀಪರ್

ವಿದೇಶಿ ಆಟಗಾರರಲ್ಲಿ ಹೆಚ್ಚಿನವರು ತಮ್ಮ ಮನೆಗೆ ತೆರಳಿದ್ದರು, ಆದರೆ, ಕೆಕೆಆರ್​ನ ಟಿಮ್ ಸೀಫರ್ಟ್ ರೋಗ ಲಕ್ಷಣಗಳೊಂದಿಗೆ ಪಾಸಿಟಿವ್ ಪಡೆದಿದ್ದರಿಂದ ಭಾರತದಲ್ಲೇ ಉಳಿಯುವ ಅನಿವಾರ್ಯತೆ ಎದುರಾಗಿತ್ತು.

ಟಿಮ್ ಸೀಫರ್ಟ್​
ಟಿಮ್ ಸೀಫರ್ಟ್​

By

Published : May 25, 2021, 5:28 PM IST

ಮುಂಬೈ: ಐಪಿಎಲ್​ ಮುಂದೂಡಿದ ಮೇಲೆ ಕೋವಿಡ್​ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದ ಕೆಕೆಆರ್​ ತಂಡದಲ್ಲಿ ನ್ಯೂಜಿಲ್ಯಾಂಡ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಟಿಮ್ ಸೀಫರ್ಟ್, ತಾವೂ ಅಂದು ಕಳೆದ ದಿನಗಳನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ.

ವಿದೇಶಿ ಆಟಗಾರರಲ್ಲಿ ಹೆಚ್ಚಿನವರು ತಮ್ಮ ಮನೆಗೆ ತೆರಳಿದ್ದರು, ಆದರೆ, ಕೆಕೆಆರ್​ನ ಟಿಮ್ ಸೀಫರ್ಟ್ ರೋಗ ಲಕ್ಷಣಗಳೊಂದಿಗೆ ಪಾಸಿಟಿವ್ ಪಡೆದಿದ್ದರಿಂದ ಭಾರತದಲ್ಲೇ ಉಳಿಯುವ ಅನಿವಾರ್ಯತೆ ಎದುರಾಗಿತ್ತು.

" ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜರ್ ನಾನು ಕೋವಿಡ್​ 19 ಪರೀಕ್ಷೆಯಲ್ಲಿ ದೃಢಪಟ್ಟಿರುವುದನ್ನು ತೋರಿಸಿದರು. ಆ ಸಂದರ್ಭದಲ್ಲಿ ಜಗತ್ತು ಒಂದು ಕ್ಷಣ ನಿಂತಂತೆ ಮತ್ತು ಮುಂದೇ ಏನು ಮಾಡಬೇಕೆಂದು ಯೋಚಿಸಲಾರದಂತಾಗಿದ್ದೆ. ಆ ಕ್ಷಣ ನಿಜಕ್ಕೂ ಭಯಾನಕವಾಗಿತ್ತು " ಎಂದು ಸೀಫರ್ಟ್ ಹೇಳಿಕೊಂಡು ಸಂದರ್ಶನದ ವೇಳೆ ಕಣ್ಣೀರಿಟ್ಟಿದ್ದಾರೆ.

ಇದೀಗ ಸಂಪೂರ್ಣ ಚೇತರಿಸಿಕೊಂಡ ಸೀಫರ್ಟ್ ಕೊನೆಗೂ ಕಳೆದ ವಾರ ನ್ಯೂಜಿಲ್ಯಾಂಡ್​​ಗೆ ಮರಳಿದ್ದಾರೆ. ಪ್ರಸ್ತುತ ಹೋಟೆಲ್​​​ವೊಂದರಲ್ಲಿ 14 ದಿನಗಳ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಹಿರಿಯ ನ್ಯೂಜಿಲ್ಯಾಂಡ್​ ಕ್ರಿಕೆಟಿಗರಾದ ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮೆಕಲಮ್ ತಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಸೀಫರ್ಟ್ ಪ್ರಶಂಸಿಸಿದ್ದಾರೆ.

"ಅವರಿಬ್ಬರು ನನಗೆ ಎಲ್ಲವನ್ನೂ ತುಂಬಾ ಸುಲಭಗೊಳಿಸಿದರು. ಕೋಲ್ಕತಾ ನೈಟ್ ರೈಡರ್ಸ್‌ನ ಸಿಇಒ ಮತ್ತು ಸಿಎಸ್‌ಕೆ ಮ್ಯಾನೇಜ್​ಮೆಂಟ್ ಚೇತರಿಸಿಕೊಳ್ಳುವರೆಗೂ ನನಗೆ ನೆರವಾದರು. ಮತ್ತು ನನ್ನ ಎಲ್ಲಾ ಕೆಲಸಗಳನ್ನು ಸುಲಭಗೊಳಿಸಿದರು. ನಂತರ ನಾನು ಮನೆಗೆ ತೆರಳಬೇಕಾದಾಗ, ಅವರು ನನ್ನನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಿದರು" ಎಂದು ಸೀಫರ್ಟ್​ ಹೇಳಿಕೊಂಡಿದ್ದಾರೆ.

ಸೀಫರ್ಟ್​ ಈ ವರ್ಷ ಕೆಕೆಆರ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ, 11ರ ಬಳಗದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ವರುಣ್​ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್​ಗೆ ಪಾಸಿಟಿವ್ ದೃಢಪಟ್ಟ ನಂತರ ಐಪಿಎಲ್ ರದ್ದುಗೊಳಿಸಲಾಗಿತ್ತು. ನಂತರ ನಡೆಸಿದ ಪರೀಕ್ಷೆಯಲ್ಲಿ ಸೀಫರ್ಟ್ ಮತ್ತು ಪ್ರಸಿಧ್ ಕೃಷ್ಣಗೂ ಕೊರೊನಾ ದೃಢಪಟ್ಟಿತ್ತು.

ಇದನ್ನು ಓದಿ:ಇಂಗ್ಲೆಂಡ್ ಪ್ರವಾಸ: ಭಾರತದ ಮಹಿಳಾ-ಪುರುಷ ತಂಡಗಳಿಗೆ ಕಠಿಣ ಕ್ವಾರಂಟೈನ್​​​

ABOUT THE AUTHOR

...view details