ಕರ್ನಾಟಕ

karnataka

ETV Bharat / sports

ಮನೆಯಲ್ಲಿದ್ದರೂ ಫಿಟ್​ನೆಸ್​ ಕಾಪಾಡಿಕೊಳ್ಳಲು ಪಂತ್ ಮಾಡುತ್ತಿದ್ದಾರೆ ಈ ಅದ್ಭುತ ಕೆಲಸ! - ರಿಷಭ್ ಪಂತ್

ಬಲವಂತದ ಕ್ವಾರಂಟೈನ್ ಬ್ರೇಕ್​ನಲ್ಲಿದ್ದೇನೆ. ಆದರೂ ಇಂಡೋರ್​ನಲ್ಲಿ ಸಕ್ರಿಯವಾಗಿರಲು ಈ ಮೂಲಕ ಸಾಧ್ಯವಾಗಿದೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ..

ರಿಷಭ್ ಪಂತ್
ರಿಷಭ್ ಪಂತ್

By

Published : May 12, 2021, 7:38 PM IST

ನವದೆಹಲಿ :ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್‌ ಪ್ರಸ್ತುತ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ.

ಟೆಸ್ಟ್​ ತಂಡದ ಪ್ರಧಾನ ವಿಕೆಟ್ ಕೀಪರ್ ಆಗಿರುವ ಅವರು ಫಿಟ್​ನೆಸ್​ ವಿಚಾರದಲ್ಲಿ ಬಹಳ ಕಾಳಜಿವಹಿಸುತ್ತಿದ್ದಾರೆ.

ಬಯೋಬಬಲ್​ನಲ್ಲಿ ಕೊರೊನಾ ಕಾಣಿಸಿದ ಹಿನ್ನಲೆ 14ನೇ ಆವೃತ್ತಿಯ ಐಪಿಎಲ್​ನ ಬಿಸಿಸಿಐ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಈಗಾಗಲೇ ಭಾರತದ ಆಟಗಾರರೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ.

ಆದರೆ, ದೇಶದಲ್ಲಿ ಕೋವಿಡ್​-19 ಎರಡನೇ ಅಲೆಯ ಅಬ್ಬರ ಕಡಿಮೆಯಾಗದಿರುವುದರಿಂದ ಕೆಲವು ಕಡೆ ಲಾಕ್​ಡೌನ್​ ಮುಂದುವರಿದೆ.

ಹಾಗಾಗಿ, ಆಟಗಾರರೆಲ್ಲರೂ ಫಿಟ್​ನೆಸ್ ಕಾಪಾಡಿಕೊಳ್ಳಲು ಮನೆಯಲ್ಲಿ ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ರಿಷಭ್ ಪಂತ್​ ಕೂಡ ಹೊರೆತಾಗಿಲ್ಲ.

ಅವರು ತಮ್ಮ ಮನೆಯ ಮುಂಭಾಗದ ಪಾರ್ಕ್​ನಲ್ಲಿ ಬೆಳೆದಿರುವ ಹುಲ್ಲನ್ನು ಮೂವರ್​ ಮೂಲಕ ಕತ್ತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿರುವ ಪಂತ್, ಬಲವಂತದ ಕ್ವಾರಂಟೈನ್ ಬ್ರೇಕ್​ನಲ್ಲಿದ್ದೇನೆ.

ಆದರೂ ಇಂಡೋರ್​ನಲ್ಲಿ ಸಕ್ರಿಯವಾಗಿರಲು ಈ ಮೂಲಕ ಸಾಧ್ಯವಾಗಿದೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ" ಎಂದು ಬರೆದು ವಿಡಿಯೋ ಶೇರ್​ ಮಾಡಿದ್ದಾರೆ.

ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ನೇತೃತ್ವವಹಿಸಿಕೊಂಡಿದ್ದ ಪಂತ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು.

ಡೆಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ದುರಾದೃಷ್ಟವಶಾತ್ ಟೂರ್ನಿ ರದ್ದಾಗಿದ್ದರಿಂದ ಡೆಲ್ಲಿ ತಂಡಕ್ಕೆ ನಿರಾಶೆಯುಂಟಾಯಿತು.

ಇದನ್ನು ಓದಿ:ಧೋನಿ ಭಾಯ್ ಮಾರ್ಗದರ್ಶನ ಮಿಸ್​ ಮಾಡ್ಕೊಳ್ತಿದೀನಿ: ಕುಲ್ದೀಪ್ ಯಾದವ್​

ABOUT THE AUTHOR

...view details