ಕರ್ನಾಟಕ

karnataka

ETV Bharat / sports

ಕೃನಾಲ್​ ಪ್ರಾಥಮಿಕ ಸಂಪರ್ಕ: ಧವನ್​ ಸೇರಿ ಈ 8 ಪ್ಲೇಯರ್ಸ್ 2ನೇ​ T20 ಪಂದ್ಯದಿಂದ ಹೊರಕ್ಕೆ?

ಟೀಂ ಇಂಡಿಯಾ ಆಲ್​ರೌಂಡರ್ ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಂಡಿರುವ ಕಾರಣ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಂಟು ಆಟಗಾರರು​ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.

Team india
Team india

By

Published : Jul 28, 2021, 4:49 PM IST

ಕೊಲಂಬೊ: ಶ್ರೀಲಂಕಾ ವಿರುದ್ಧ ಇಂದು ಎರಡನೇ ಟಿ-20 ಪಂದ್ಯ ನಡೆಯಲಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ತಂಡದ ಕ್ಯಾಪ್ಟನ್​ ಶಿಖರ್​ ಧವನ್​ ಸೇರಿದಂತೆ ತಂಡದ ಪ್ರಮುಖ 8 ಪ್ಲೇಯರ್ಸ್​​ ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಟೀಂ ಇಂಡಿಯಾದ ಆಲ್​ರೌಂಡರ್ ಕೃನಾಲ್​ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಂಡಿದ್ದ ಕಾರಣ ನಿನ್ನೆ ನಡೆಯಬೇಕಾಗಿದ್ದ ಪಂದ್ಯ ಒಂದು ದಿನ ಮುಂದೂಡಿಕೆಯಾಗಿತ್ತು. ಈಗಾಗಲೇ ಪಾಂಡ್ಯಾ ಜೊತೆಗಿನ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್​ ಮಾಡಿಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಆದರೆ ಕೋವಿಡ್ ಮಾರ್ಗಸೂಚಿ ಪ್ರಕಾರ ಮುಂದಿನ ಕೆಲ ದಿನಗಳ ಕಾಲ ಇವರು ಕ್ವಾರಂಟೈನ್​​ಲ್ಲಿರಬೇಕಾಗಿರುವ ಕಾರಣ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೃನಾಲ್ ಪಾಂಡ್ಯಾಗೆ ಕೊರೊನಾ

ಯಾರೆಲ್ಲ ಹೊರಗೆ?

ಶಿಖರ್​ ಧವನ್​, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯಾ, ಯಜುವೇಂದ್ರ ಚಹಲ್​, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಕೃಷ್ಣಪ್ಪ ಗೌತಮ್​ ಹಾಗೂ ಇಶಾನ್​​ ಕಿಶನ್​

ಒಂದು ವೇಳೆ ಈ ಮೇಲಿನ ಪ್ಲೇಯರ್ಸ್​ ತಂಡದಿಂದ ಹೊರಗುಳಿದರೆ, ಋತುರಾಜ್​ ಗಾಯಕ್‌ವಾಡ್​, ನಿತೀಶ್ ರಾಣಾ, ದೇವದತ್ ಪಡಿಕ್ಕಲ್​​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಕೃನಾಲ್​ ಪಾಂಡ್ಯಾ ಪ್ರಾಥಮಿಕ ಸಂಪರ್ಕಿತ ಪ್ಲೇಯರ್ಸ್​

ಈಗಾಗಲೇ ಮುಕ್ತಾಯಗೊಂಡಿರುವ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದ ಗೆಲುವು ದಾಖಲು ಮಾಡಿದ್ದು, ಮೊದಲ ಟಿ-20 ಪಂದ್ಯದಲ್ಲೂ 38ರನ್​ಗಳ ಜಯದೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಲಂಕಾ ತಂಡಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿಯಾಗಿದ್ದು, ಗೆಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಗುಡ್​ ನ್ಯೂಸ್​: ಕೃನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದವರಿಗೆಲ್ಲಾ COVID 19 ನೆಗೆಟಿವ್

ನಿಗದಿಯಂತೆ ಮುಂದಿನ ಎರಡು ಪಂದ್ಯ

ಕೊರೊನಾ ಕಾರಣದಿಂದ ಎರಡನೇ ಟಿ-20 ಪಂದ್ಯ ನಿನ್ನೆಯ ಬದಲಿಗೆ ಇಂದು ನಡೆಯುತ್ತಿದ್ದು, ಮುಂದಿನ ಟಿ-20 ಪಂದ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ.

ABOUT THE AUTHOR

...view details