ಹೋವ್: ಕೌಂಟಿ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರಾ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ನಿನ್ನೆ ಮಿಡ್ಲ್‌ಸೆಕ್ಸ್ ತಂಡದ ಘಾತಕ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರು, ಲೀಲಾಜಾಲವಾಗಿ ಬ್ಯಾಟ್ ಬೀಸಿ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರು. ಪೂಜಾರಾ, ಪಾಕ್ ವೇಗಿ ಶಹೀನ್ ಅಫ್ರಿದಿ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿ ರನ್ ಕಲೆ ಹಾಕಿದ್ದು ವಿಶೇಷವಾಗಿತ್ತು.
ಕೌಂಟಿ ಕ್ರಿಕೆಟ್‌ನಲ್ಲಿ ಪೂಜಾರ 4ನೇ ಶತಕ; ಪಾಕ್ ವೇಗಿಗೆ ಸಿಕ್ಸರ್, ಬೌಂಡರಿ ಬಿಸಿ - ಸಸ್ಸೆಕ್ಸ್
ಇಂಗ್ಲೆಂಡ್‌ನ ಹೋವ್‌ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ ಭಾರತದ ಅನುಭವಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಾ ಮತ್ತೆ ಶತಕದಾಟದಿಂದ ವಿಶ್ವ ಕ್ರಿಕೆಟ್ ಗಮನ ಸೆಳೆದರು.

ಚೇತೇಶ್ವರ್ ಪೂಜಾರಾ
ಕೌಂಟಿಯಲ್ಲಿ ಈಗಾಗಲೇ ಎರಡು ದ್ವಿಶತಕ ಹಾಗು ಒಂದು ಶತಕದ ಆಟವಾಡಿರುವ ಪೂಜಾರಾ, ನಿನ್ನೆ ನಡೆದ ಪಂದ್ಯದಲ್ಲಿ 133 ಎಸೆತಗಳಲ್ಲಿ 13 ಬೌಂಡರಿ ಹಾಗು 2 ಸಿಕ್ಸರ್‌ಗಳ ಮೂಲಕ ಮೂರಂಕಿ ರನ್ ಕಲೆ ಹಾಕಿದರು. ಶಹೀನ್ ಅಫ್ರಿದಿ ಅವರ ಶಾರ್ಟ್ ಎಸೆತವನ್ನು ನಿರಾಯಾಸವಾಗಿ ಸಿಕ್ಸರ್ ಮತ್ತು ಬೌಂಡರಿಗಟ್ಟಿದ ಇವರು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಅನುಭವ ಪ್ರದರ್ಶಿಸಿದರು. ಇದರೊಂದಿಗೆ ನಾಲ್ಕು ಪಂದ್ಯಗಳಲ್ಲಿ ಈಗಾಗಲೇ 500 ರನ್ ಗಡಿ ದಾಟಿದ್ದಾರೆ.
ಇದನ್ನೂ ಓದಿ:ಕೋಲ್ಕತ್ತಾ ವಿರುದ್ಧ ಲಖನೌಗೆ ಭರ್ಜರಿ ಜಯ.. ಗುಜರಾತ್ ಹಿಂದಿಕ್ಕಿ ಅಗ್ರಸ್ಥಾನಕ್ಕೆ ರಾಹುಲ್ ಪಡೆ ಲಗ್ಗೆ
Last Updated : May 8, 2022, 10:13 AM IST