ಬಿಗ್ ಬ್ಯಾಷ್ ಟಿ20 ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಆಟಗಾರ ಬಾರಿಸಿದ ಚೆಂಡನ್ನು ಬ್ರಿಸ್ಬೇನ್ ತಂಡದ ಮೈಕಲ್ ನೀಸರ್ ಕ್ಯಾಚ್ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಂಪೈಲ್ ಇದನ್ನು ಸಿಕ್ಸರ್ ಎಂದು ತೀರ್ಪಿತ್ತು ಬಳಿಕ ಥರ್ಡ್ ಅಂಪೈರ್ ಮೊರೆ ಹೋಗಿದ್ದರು. ಆದ್ರೆ ಥರ್ಡ್ ಅಂಪೈರ್ ಇದನ್ನು ಔಟ್ ಎಂದು ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಈಗ ಈ ಕ್ಯಾಚ್ ನೆಟ್ಟಿಗರ ಮನೆಯಲ್ಲಿ ಬಹು ಚರ್ಚೆಯ ವಿಷಯವಾಗಿದೆ.
ಆಗಿದ್ದೇನು?: ಭಾನುವಾರ ನಡೆದ ಪಂದ್ಯದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಸಿಡ್ನಿ ಸಿಕ್ಸರ್ಸ್ ಆಟಗಾರ ಜೋರ್ಡಾನ್ ಸಿಲ್ಕ್ ಹೊಡೆದ ಚೆಂಡನ್ನು ಬ್ರಿಸ್ಬೇನ್ ಹೀಟ್ ಆಟಗಾರ ನೀಸರ್ ಹಿಡಿದರು. ಈ ಕ್ಯಾಚ್ ನಂತರ ನೀಸರ್ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಚೆಂಡನ್ನು ಗಾಳಿಯಲ್ಲಿ ಎಸೆದಿದ್ದರು. ಚೆಂಡು ಸಹ ಬೌಂಡರಿ ಲೈನ್ ದಾಟಿತ್ತು. ಈ ಸಂದರ್ಭದಲ್ಲಿ ಬೌಂಡರಿ ಲೈನ್ ಆಚೆಯಿದ್ದ ನೀಸರ್ ಮತ್ತೆ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು ಮೈದಾನದೊಳಗೆ ಗಾಳಿಯಲ್ಲಿ ಎಸೆದರು. ಬಳಿಕ ಬೌಂಡರಿ ಲೈನ್ ಸರಿದು ಬಂದ ನೀಸರ್ ಗಾಳಿಯಲ್ಲಿದ್ದ ಚೆಂಡು ಹಿಡಿದುಕೊಂಡರು.
ಇದು ಔಟೋ ಅಥವಾ ಸಿಕ್ಸರೋ ಅಂತ ಅಂಪೈರ್ ಕೂಡಾ ಗೊಂದಲಕ್ಕೀಡಾಗಿದ್ದರು. ಹೀಗಾಗಿ ಅಂಪೈರ್ ತಕ್ಷಣಕ್ಕೆ ಸಿಕ್ಸರ್ ಎಂದು ತಮ್ಮ ನಿರ್ಣಯ ನೀಡಿ ಥರ್ಡ್ ಅಂಪೈರ್ಗೆ ಮೊರೆ ಹೋಗಿದ್ದಾರೆ. ಬಹಳ ಸಮಯದವರೆಗೂ ಪರಿಶೀಲನೆ ನಡೆದು ಮೂರನೇ ಅಂಪೈರ್ ಇದನ್ನು ಔಟ್ ಎಂದು ಹೇಳಿದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರಿಗೂ ಅರೆಕ್ಷಣ ಅಚ್ಚರಿ!.