ಸೌತಾಂಪ್ಟನ್: ಭಾರತದ ಮುಂಚೂಣಿ ವೇಗಿಯಾಗಿರುವ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಮೈದಾನದಲ್ಲಿ ತಮ್ಮ ಭಾವನೆಗಳನ್ನು ತೋರಿಸುವುದು ತುಂಬಾ ಅಪರೂಪ. ಅವರ ಪ್ರಕಾರ ಆಕ್ರಮಣಶೀಲತೆಯನ್ನು ನಿಯಂತ್ರಿಸಿದ್ದೇ ತಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
"ನಾನು ಯುವಕನಾಗಿ ಕ್ರಿಕೆಟ್ ಆರಂಭಿಸಿದ ದಿನಗಳಲ್ಲಿ ತುಂಬಾ ಕೋಪಗೊಳ್ಳುತ್ತಿದ್ದೆ. ಆ ಸಂದರ್ಭದಲ್ಲಿ ನಾನು ಎಲ್ಲಾ ರೀತಿಯ ಗಿಮಿಕ್ಗಳನ್ನು ಮಾಡುತ್ತಿದ್ದೆ. ಆದರೆ ಅವು ಯಾವುದು ನನಗೆ ಕೆಲಸಕ್ಕೆ ಬರಲಿಲ್ಲ " ಎಂದು ಐಸಿಸಿ WTC ಫೈನಲ್ ಸಂದರ್ಭದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈಗ ಕೆಲವು ವರ್ಷಗಳಿಂದ ಒಳ್ಳೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ನನಗೆ ಯಾವುದು ಕೆಲಸ ಮಾಡುತ್ತದೆ ಎಂಬುದರ ಅರಿವಾಯಿತು. ಹಾಗಾಗಿ ನಾನು ಯಾವಾಗಲೂ ನಗುತ್ತಿರುತ್ತೇನೆ. ಆದರೆ ಮನದಲ್ಲಿರುವ ಕಿಚ್ಚು ಯಾವಾಗಲೂ ಉರಿಯುತ್ತಿರುತ್ತದೆ ಎಂದು ಬುಮ್ರಾ ಹೇಳಿಕೊಂಡಿದ್ದಾರೆ.