ಬರ್ಮಿಂಗ್‌ಹ್ಯಾಮ್:ಕಾಮನ್ವೆಲ್ತ್‌ನಲ್ಲಿ ಮೊದಲ ಬಾರಿಗೆ ನಡೆದ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡ ಬೆಳ್ಳಿ ರೇಖೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ನೀನಾ - ನಾನಾ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಕೇವಲ 9 ರನ್ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿತು.
ಟಾಸ್ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಅಲಿಸ್ಸಾ ಹೀಲಿ (7 ರನ್) ಮೂರನೇ ಓವರ್‌ನಲ್ಲಿ ರೇಣುಕಾ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ್ತಿ ಬೆತ್ ಮೂನಿ ಜೊತೆ ಕೂಡಿಕೊಂಡ ನಾಯಕಿ ಮೆಗ್ ಲ್ಯಾನಿಂಗ್ 50 ರನ್‌ಗಳ ಜೊತೆಯಾಟ ನೀಡಿದರು. ತಂಡದ ಮೊತ್ತ 83 ಆಗಿದ್ದಾಗ ರನ್ ಕದಿಯಲು ಹೋದ ಮೆಗ್ ಲ್ಯಾನಿಂಗ್ (36 ರನ್) ರನೌಟ್ಗೆ ಬಲಿಯಾದರು.
ಲ್ಯಾನಿಂಗ್ ಔಟಾದ ಬಳಿಕ ಬಂದ ಆಟಗಾರ್ತಿಯರು ರನ್ಗಳಿಸಲು ವಿಫಲರಾದರು. ಆಸ್ಟ್ರೇಲಿಯಾ ಪರ ಬೆತ್ ಮೂನಿ 61 ರನ್, ತಹ್ಲಿಯಾ ಮೆಕ್‌ಗ್ರಾತ್ 2 ರನ್, ಆಶ್ಲೀ ಗಾರ್ಡ್ನರ್ 25 ರನ್, ಗ್ರೇಸ್ ಹ್ಯಾರಿಸ್ 2 ರನ್, ಅಲಾನಾ ಕಿಂಗ್ 1 ರನ್ಗೆ ಪೆವಿಲಿಯನ್ ಹಾದಿ ಹಿಡಿದ್ರೆ, ಹೇನ್ಸ್ 18 ರನ್ ಮತ್ತು ಸ್ಕಟ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಒಟ್ಟಿನಲ್ಲಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 161 ರನ್ಗಳನ್ನು ಕಲೆ ಹಾಕಿತು. ಭಾರತದ ಪರ ರೆಣುಕಾ ಸಿಂಗ್ ಮತ್ತು ಸ್ನೇಹ ರಾಣ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ನೀಡಿದ 162 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕರಾದ ಸ್ಮೃತಿ ಮಂಧಾನ (6 ರನ್) ಮತ್ತು ಶಪಾಲಿ ವರ್ಮಾ (11 ರನ್) ಕಡಿಮೆ ರನ್‌ಗಳಿಗೆ ಪೆವಿಲಿಯನ್ ಸೇರಿದರು. ಆಗ ತಂಡದ ಸ್ಕೋರ್ ಕೇವಲ 22 ರನ್ ಆಗಿತ್ತು. ಬಳಿಕ ಕ್ರೀಸ್ಗೆ ಬಂದ ರೋಡ್ರಿಗಾಸ್ (33 ರನ್) ಜತೆಗೂಡಿದ ಹರ್ಮನ್ ಪ್ರೀತ್ ಕೌರ್ ಇನಿಂಗ್ಸ್ ಕಟ್ಟಿದರು.