ಕರ್ನಾಟಕ

karnataka

ETV Bharat / sports

Commonwealth Games 2022.. ಕಾಮನವೆಲ್ತ್​ ಗೇಮ್ಸ್​​ನಲ್ಲಿ ಮಹಿಳಾ ಕ್ರಿಕೆಟ್​​.. ಭಾರತದ ಎದುರಾಳಿ ಆಸೀಸ್‌.. - Commonwealth Games news

ವೇಳಾಪಟ್ಟಿ ಪ್ರಕಾರ ಜುಲೈ 29ರಂದು ಆಸ್ಟ್ರೇಲಿಯಾ-ಭಾರತ(India vs Australia) ಹಾಗೂ ಪಾಕಿಸ್ತಾನ-ವೆಸ್ಟ್​ ಇಂಡೀಸ್​ ತಂಡಗಳ ನಡುವೆ ಪಂದ್ಯ ಆಯೋಜನಗೊಂಡಿವೆ. ಉಳಿದಂತೆ ಆಗಸ್ಟ್​​ 7ರಂದು ಕಂಚು ಹಾಗೂ ಚಿನ್ನದ ಪದಕಕ್ಕಾಗಿ ಪಂದ್ಯಗಳು ನಿಗದಿಯಾಗಿವೆ..

Women Cricket
Women Cricket

By

Published : Nov 12, 2021, 6:40 PM IST

ಬರ್ಮಿಂಗ್​ಹ್ಯಾಮ್​​: 2022ರಲ್ಲಿ ನಡೆಯಲಿರುವ ಕಾಮನ್​ವೆಲ್ತ್​​​ ಗೇಮ್ಸ್​​(Commonwealth Games)ನಲ್ಲಿ ಮಹಿಳಾ ಕ್ರಿಕೆಟ್​ ಆಯೋಜನೆ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟ್​​​ ಆಡಿಸಲಾಗುತ್ತಿದೆ. ಭಾರತ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ.

ಜುಲೈ 29ರಂದು ಉಭಯ ತಂಡಗಳ ಮಧ್ಯೆ ಪಂದ್ಯ ಆಯೋಜನೆಗೊಂಡಿದೆ. ಆಗಸ್ಟ್​ 7ರಂದು ಫೈನಲ್​ ಪಂದ್ಯಕ್ಕಾಗಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ. ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಟಿ-20 ಮಾದರಿಯ ಕ್ರಿಕೆಟ್​ ನಡೆಯಲಿದೆ.

ವೇಳಾಪಟ್ಟಿ ಪ್ರಕಾರ ಜುಲೈ 29ರಂದು ಆಸ್ಟ್ರೇಲಿಯಾ-ಭಾರತ(India vs Australia) ಹಾಗೂ ಪಾಕಿಸ್ತಾನ-ವೆಸ್ಟ್​ ಇಂಡೀಸ್​ ತಂಡಗಳ ನಡುವೆ ಪಂದ್ಯ ಆಯೋಜನಗೊಂಡಿವೆ. ಉಳಿದಂತೆ ಆಗಸ್ಟ್​​ 7ರಂದು ಕಂಚು ಹಾಗೂ ಚಿನ್ನದ ಪದಕಕ್ಕಾಗಿ ಪಂದ್ಯಗಳು ನಿಗದಿಯಾಗಿವೆ.

ಈ ಹಿಂದೆ 1998ರ ಕಾಮನ್​ವೆಲ್ತ್​ನಲ್ಲಿ ಪುರುಷರ ಕ್ರಿಕೆಟ್ ಪಂದ್ಯ ನಡೆಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್​​ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿರಿ:PAK vs AUS : ಆಸೀಸ್​ ವಿರುದ್ಧದ ಸೆಮೀಸ್​ಗೂ ಮುನ್ನ ಎರಡು ದಿನ ICUನಲ್ಲಿ ಚಿಕಿತ್ಸೆ ಪಡೆದಿದ್ದ ರಿಜ್ವಾನ್!

ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಭಾರತ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಭಾಗಿಯಾಗಲಿವೆ. ಜುಲೈ 29ರಿಂದ ಆಗಸ್ಟ್ 7ರವರೆಗೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ABOUT THE AUTHOR

...view details