ಕಾನ್ಪುರ:ಪ್ರವಾಸಿ ನ್ಯೂಜಿಲ್ಯಾಂಡ್ (New zealand vs India) ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ವೈಟ್ವಾಶ್ ಮಾಡಿರುವ ಟೀಂ ಇಂಡಿಯಾ, ಇದೀಗ ಮತ್ತೊಂದು ಚಾಲೆಂಜ್ಗೆ ಅಣಿಯಾಗಲಿದೆ. ಅದಕ್ಕಾಗಿ ಉತ್ತರ ಪ್ರದೇಶದ ಕಾನ್ಪುರ್ ತಲುಪಿದೆ.
ಅಜಿಂಕ್ಯಾ ರಹಾನೆ (Ajinkya Rahane) ನೇತೃತ್ವದ ಟೀಂ ಇಂಡಿಯಾ (Team India) ನವೆಂಬರ್ 25ರಿಂದ ನ್ಯೂಜಿಲ್ಯಾಂಡ್ (New Zealand) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಗ್ರೀನ್ ಪಾರ್ಕ್ ತಲುಪಿವೆ. ಕೋವಿಡ್ನಿಂದಾಗಿ ಬಯೋಬಬಲ್ನಲ್ಲಿರುವ ಟೀಂ ಇಂಡಿಯಾ ನಾಳೆಯಿಂದ ಅಭ್ಯಾಸ ಶುರು ಮಾಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕೋಚ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರಹಾನೆ ಬಯೋ ಬಬಲ್ ಬ್ರೇಕ್ ಮಾಡಿ ಮೈದಾನಕ್ಕೆ ಲಗ್ಗೆ ಹಾಕಿದ್ದು, ಕ್ಯುರೇಟರ್ ಜೊತೆ ಕೆಲಹೊತ್ತು ಮಾತುಕತೆ ನಡೆಸಿದರು
ಟೀಂ ಇಂಡಿಯಾ ಅಭ್ಯಾಸ ನಡೆಸುವ ಪಿಚ್ ಬಗ್ಗೆ ಅತೃಪ್ತಿ ಹೊಂದಿರುವ ಕಾರಣ ಮೈದಾನಕ್ಕೆ ಲಗ್ಗೆ ಹಾಕಿ ಅಲ್ಲಿನ ಪಿಚ್ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಜೊತೆಗೆ ಕ್ಯುರೇಟರ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.