ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕ್ರಿಕೆಟರ್ ಎಂದರೆ ಅದು ಶಿಖರ್ ಧವನ್. ಹಲವಾರು ರೀತಿಯ ವಿಡಿಯೋ(ರೀಲ್ಸ್) ಮಾಡಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಇದೀಗ ವಿಂಡೀಸ್ ಪ್ರವಾಸದಲ್ಲಿರುವ ತಂಡದ ಸದಸ್ಯರನ್ನು ಒಳಗೊಂಡ "ಹಾಯ್" ಟ್ರೆಂಡ್ ವಿಡಿಯೋವನ್ನು ಶಿಖರ್ ಹಂಚಿಕೊಂಡಿದ್ದು ವೈರಲ್ ಆಗಿದೆ.
ಶಿಖರ್ ಧವನ್ ನೇತೃತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ಗೆ ಮಂಗಳವಾರ ಮುಂಜಾನೆ ಬಂದಿಳಿದಿದೆ. ಈ ವೇಳೆ "ರೀಲ್ಸ್ ಸ್ಟಾರ್" ಶಿಖರ್ ಧವನ್ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ತಂಡದ ಸದಸ್ಯರು ಹಾಯ್ ಹೇಳುವ ವಿಡಿಯೋವನ್ನು ಮಾಡಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದು, "ಈ ರೀತಿಯ ಸಾಹಸಗಳನ್ನು ಧವನ್ ಮಾತ್ರ ಮಾಡಲು ಸಾಧ್ಯ" ಎಂದರೆ, ಬಾಲಿವುಡ್ ನಟ ರಣವೀರ್ ಸಿಂಗ್ "ಹಹಹಾ ನಂಬರ್ ಒನ್" ಎಂದು ಕಮೆಂಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಶಿಖರ್ ಧವನ್ಗೆ ತಂಡದ ನಾಯಕತ್ವ ನೀಡಲಾಗಿದೆ. ಜುಲೈ 29ರಿಂದ ಸರಣಿ ಆರಂಭವಾಗಲಿದೆ. ತಂಡದ ಖಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಾ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ:ENG vs SA: ವಿದಾಯದ ಪಂದ್ಯದಲ್ಲಿ ಸೋತು ನಿರ್ಗಮಿಸಿದ ಬೆನ್ ಸ್ಟೋಕ್ಸ್; ದ.ಆಫ್ರಿಕಾಗೆ 62 ರನ್ ಜಯ