ಮುಂಬೈ (ಮಹಾರಾಷ್ಟ್ರ):ಸಾಯಿ ಇನ್ಫ್ರಾ ಎಂಟರ್‌ಟೈನ್‌ಮೆಂಟ್ ಮತ್ತು ಮೆರಾಕಿಯಾಂಜ್ ಮೀಡಿಯಾ ಹೌಸ್ನ ಸಹಯೋಗದಲ್ಲಿ ಚಿತ್ರ ತಾರೆಯರನ್ನೇ ಒಳಗೊಂಡ ಸಿನಿ ಸ್ಟಾರ್ ಕ್ರಿಕೆಟ್ ಲೀಗ್‌ನ ಮೊದಲ ಆವೃತ್ತಿಯನ್ನು ಅನಾವರಣಗೊಳಿಸಲಾಯಿತು. ಮಹಿಳಾ ಸಬಲೀಕರಣ, ಫಿಟ್‌ನೆಸ್ ಮತ್ತು ಮನರಂಜನೆ ಉದ್ದೇಶ ಇಟ್ಟುಕೊಂಡು ಈ ಲೀಗ್ ಅನ್ನು ಹುಟ್ಟುಹಾಕಲಾಗಿದೆ.
ಈ ಸಿನಿ ಸ್ಟಾರ್ ಕ್ರಿಕೆಟ್ ಲೀಗ್ 10-ಕಂತುಗಳ ಸರಣಿಯಾಗಿದ್ದು, ಕಿರುತೆರೆ ಮತ್ತು ಹಿರಿತೆರೆ ಉದ್ಯಮದ ದಿವಾಸ್‌ನೊಂದಿಗೆ ಪ್ರಾರಂಭವಾಗಲಿದೆ. ಮಹಿಳಾ ಸಬಲೀಕರಣದ ಸುತ್ತ ಕೇಂದ್ರೀಕೃತವಾಗಿರುವ ಮೊದಲ ಆವೃತ್ತಿಯು ಎಲ್ಲ ಮಹಿಳಾ ತಂಡಗಳನ್ನು ಹೊಂದಿರುವುದು ವಿಶೇಷ.
ಲೀಗ್ಗಾಗಿ 6 ತಂಡಗಳನ್ನು ರಚಿಸಲಾಗಿದ್ದು, ಆ ಆರು ತಂಡಗಳಿಗೂ ನಾಯಕರನ್ನು ನೇಮಿಸಲಾಯಿತು. ಸನಾ ಸುಲ್ತಾನ್ ಖಾನ್, ಪ್ರಾಚಿ ತೆಹ್ಲಾನ್, ಸಯಂತನಿ ಗೋಶ್, ಬೆನಾಫ್ಶಾ ಸೂನಾವಾಲ್ಲಾ, ಜಸ್ವಿರ್ ಕೌರ್ ಮತ್ತು ಶಿವಾನಿ ಸುರ್ವೆಯಂತಹ ಹೆಸರಾಂತ ಸೆಲೆಬ್ರಿಟಿಗಳನ್ನು ಈ ತಂಡಗಳ ನಾಯಕರನ್ನಾಗಿ ಇದೇ ವೇಳೆ ಘೋಷಿಸಲಾಯಿತು.
ಇತರೆ ಸೆಲೆಬ್ರಿಟಿಗಳಾದ ಅಫ್ಸರ್ ಖಾನ್, ಅಮನ್‌ಪ್ರೀತ್ ಕೌರ್, ಅಂಜು ಜಾಧವ್, ಅನುಪ್ರಿಯಾ ಲಕ್ಷ್ಮಿ ಕಟೋಚ್, ಅನುಪ್ರಿಯಾ ಪರ್ಮಾರ್, ಅಸ್ಮಾ ಸೈಯದ್, ಗರಿಮಾ ಜೈನ್, ಜಿನಾಲ್ ಜೋಶಿ, ಕ್ರಿಶಾ ಸಿಂಗ್, ಕೀರ್ತಿ ಚೌಧರಿ, ಕೃತಿಕಾ ತುಲಾಸ್ಕರ್, ಮಾಧವಿ ನೇಮ್ಕರ್, ಮಹಿಮಾ ಗುಪ್ತಾ, ಮಾನ್ಸಿ ಸುರ್ವಸೆ, ಮುಸ್ಕಾನ್ ಲಾಲ್ವಾನಿ, ನಿಕ್ಕಿ ಚಾವ್ಲಾ, ನಿವೇದಿತಾ ಡೇ, ಪಾಲಕ್ ಪುರ್ಸ್ವಾನಿ, ಪ್ರಿಯಾಂಕಾ ಬೋರಾ, ಪ್ರಿಯಾಂಕಾ ತಿವಾರಿ, ರಜಪೂತ್ ಗೌರಿ, ರಶ್ಮಿ ಗುಪ್ತಾ, ಸನಯಾ ಪೀಠ್ವಾಲಾ, ಈ ಕ್ರಿಕೆಟ್ ಲೀಗ್‌ನ ಭಾಗವಾಗಿರುವ ಸಂಗೀತಾ ಕಪೂರ್, ಸತ್ಯಂವದಾ ಸಿಂಗ್, ಶಮಿನ್, ಸೃಷ್ಟಿ ಮಹೇಶ್ವರಿ, ಸುಶ್ಮಿತಾ ಸಿಂಗ್, ತಾನ್ಯಾ ಪುರೋಹಿತ್ ಮತ್ತು ವಂದನಾ ಲಾಲ್ವಾನಿ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದು ಕಾರ್ಯಕ್ರವನ್ನು ಅದ್ಧೂರಿಗೊಳಿಸಿದರು.
ಇವರು ಮಾತ್ರವಲ್ಲದೇ, ಗದರ್: ದಿ ಹೀರೋ: ಎ ಲವ್ ಸ್ಟೋರಿ, ಅಪ್ನೆ, ಅಪ್ನೆ 2 ಮತ್ತು ಇತರ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಹೆಸರುವಾಸಿಯಾದ ಚಲನಚಿತ್ರ ನಿರ್ದೇಶಕ ಅನಿಲ್ ಶರ್ಮಾ ಕೂಡ ಈ ಸಮಾರಂಭದಲ್ಲಿ ಉಪಸ್ಥಿತಿ ಇದ್ದರು. ಈವೆಂಟ್ ಅನ್ನು ನಟ ಮತ್ತು ನಿರೂಪಕ ಪ್ರೀತಮ್ ಸಿಂಗ್ ಅವರು ನಡೆಸಿಕೊಟ್ಟರು. ಇದೇ ವೇಳೆ ಸಿನಿ ಸ್ಟಾರ್ ಕ್ರಿಕೆಟ್ ಲೀಗ್ ಬಗ್ಗೆ ವಿವರವಾಗಿ ವಿವರಿಸಿದರು.