ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್‌ನಲ್ಲಿ ಅವಮಾನ, ಶ್ರೀಲಂಕಾದಲ್ಲಿ ಸನ್ಮಾನ! ಇವರು ಚಾಂಪಿಯನ್‌ ತಂಡದ ಬೆನ್ನೆಲುಬು! - ಏಷ್ಯಾಕಪ್​ನಲ್ಲಿ ಶ್ರೀಲಂಕಾ ತಂಡ

ಇಂಗ್ಲೆಂಡ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ವಜಾಗೊಂಡು ತೀವ್ರ ಅವಮಾನಕ್ಕೊಳಗಾಗಿದ್ದ ಸಿಲ್ವರ್‌ವುಡ್ ಇದೀಗ ಸಿಂಹಳೀಯರ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Chris Silverwood
Chris Silverwood

By

Published : Sep 12, 2022, 8:18 AM IST

ಕೊಲಂಬೊ(ಶ್ರೀಲಂಕಾ):ಕಳೆದ ಕೆಲ ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನ ನೀಡಿ 4-0 ಅಂತರದಿಂದ ಸರಣಿ ಕೈಚೆಲ್ಲಿತ್ತು. ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಅಂದಿನ ಮುಖ್ಯ​​ ಕೋಚ್​​ ಕ್ರಿಸ್​ ಸಿಲ್ವರ್​​ವುಡ್ ಹೆಗಲ ಮೇಲೆ ಹಾಕಿ ಅವರನ್ನು ಆ ಹುದ್ದೆಯಿಂದಲೇ ವಜಾಗೊಳಿಸಲಾಗಿತ್ತು. ಇದರ ನಂತರ ಶ್ರೀಲಂಕಾ ಕ್ರಿಕೆಟ್‌ ಬೋರ್ಡ್‌ ಎರಡು ವರ್ಷಗಳ ಅವಧಿಗೆ ಸಿಲ್ವರ್‌ವುಡ್‌ ಅವರನ್ನು ತನ್ನ ತಂಡದ ಮುಖ್ಯ ಕೋಚ್​ ಆಗಿ ನೇಮಿಸಿತ್ತು.

ಕೇವಲ ಎರಡು ತಿಂಗಳ ಹಿಂದಷ್ಟೇ ಶ್ರೀಲಂಕಾ ಕೋಚ್​ ಆಗಿ ಕೆಲಸ ಶುರು ಮಾಡಿರುವ 47 ವರ್ಷದ ಕ್ರಿಸ್​ ಸಿಲ್ವರ್​ವುಡ್​ ಇದೀಗ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಏಷ್ಯಾ ಕಪ್​​ನಲ್ಲಿ ಯಾರೂ ಸಹ ಊಹಿಸಿದ ರೀತಿಯಲ್ಲಿ ತಂಡವನ್ನು ಸನ್ನದ್ಧಗೊಳಿಸಿದ್ದ ಕ್ರಿಸ್ ಸಿಲ್ವರ್​ವುಡ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ. ಪಂದ್ಯ ನಡೆಯುತ್ತಿದ್ದಾಗ ಇವರು ಕೆಲವು ಕೋಡ್ ಬಳಕೆ ಮಾಡಿ, ಆಟಗಾರರಿಗೆ ಮಾಹಿತಿ ರವಾನಿಸುತ್ತಿದ್ದರು. ಅದು ಸಹ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ:ಏಷ್ಯಾ ಕಪ್ 2022: ಪ್ರಶಸ್ತಿಗೆ ಮುತ್ತಿಕ್ಕಿದ ಶ್ರೀಲಂಕಾ ಗೆದ್ದ ಬಹುಮಾನದ ಮೊತ್ತ ಎಷ್ಟು ಗೊತ್ತೇ?

ಏಷ್ಯಾ ಕಪ್​ನಲ್ಲಿ ಶ್ರೀಲಂಕಾ ಚಾಂಪಿಯನ್​ ಆಗಲಿದೆ ಎಂಬ ವಿಶ್ವಾಸ ಯಾರಿಗೂ ಇರಲಿಲ್ಲ. ಅದೇ ರೀತಿಯಲ್ಲೇ ಅಭಿಯಾನವನ್ನೂ ಸಹ ಆರಂಭಿಸಿತ್ತು. ತಾನು ಆಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲುಂಡಿತ್ತು. ನಂತರ ಬಾಂಗ್ಲಾದೇಶದ ವಿರುದ್ಧ 2 ವಿಕೆಟ್​​ಗಳ ರೋಚಕ ಗೆಲುವು ಪಡೆದು, ಸೂಪರ್ ಫೋರ್​​​ಗೆ ಲಗ್ಗೆ ಹಾಕಿತ್ತು. ಸೂಪರ್​ ಫೋರ್​ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ 4 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿ, ಲೀಗ್​ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಬಳಿಕ ತಂಡ ಹಿಂತಿರುಗಿ ನೋಡಲಿಲ್ಲ. ಬಲಿಷ್ಠ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನೂ ಹಿಮ್ಮೆಟ್ಟಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಏಷ್ಯಾ ಕಪ್​​ನಲ್ಲಿ ಪಂದ್ಯದಿಂದ ಪಂದ್ಯಕ್ಕೆ ಚೇತರಿಕೆ ಕಂಡು, ಅತ್ಯುತ್ತಮ ಪ್ರದರ್ಶನವನ್ನೂ ನೀಡುತ್ತಾ ಸಾಗಿದ ಲಂಕಾ ಕೊನೆಯದಾಗಿ ಪ್ರಶಸ್ತಿ ಸುತ್ತಿನಲ್ಲಿ ಪಾಕಿಸ್ತಾನವನ್ನು​​​ ಬಗ್ಗು ಬಡಿದು ಪ್ರಶಸ್ತಿ ಗೆದ್ದುಕೊಂಡಿತು. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಶ್ರೀಲಂಕಾ ತಂಡದ ಕ್ಯಾಪ್ಟನ್​​ ಶನಕ, ತಂಡದ ಗೆಲುವಿನಲ್ಲಿ ಕೋಚ್​​​ ಕ್ರಿಸ್​ ಸಿಲ್ವರ್‌ವುಡ್​ ಅವರ ಕೊಡುಗೆ ತುಂಬಾ ಇದೆ ಎಂದು ಸ್ಮರಿಸಿದರು.

ABOUT THE AUTHOR

...view details