ಕರ್ನಾಟಕ

karnataka

ETV Bharat / sports

ಪಂಜಾಬ್​ ಪರ ಕ್ರಿಸ್​​ ಗೇಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಬೇಕು: ಗಂಭೀರ್​​​ - 2020 IPL

ಐಪಿಎಲ್​​​ನಲ್ಲಿ ಪಂಜಾಬ್​ ತಂಡದಲ್ಲಿ ಕ್ರಿಸ್​​ ಗೇಲ್ ಬ್ಯಾಟಿಂಗ್ ಕ್ರಮಾಂಕವನ್ನ ಗಂಭೀರ್ ಪ್ರಶ್ನಿಸಿದ್ದು, ಅವರಿಗೆ ಆರಂಭಿಕರಾಗಿ ಬಡ್ತಿ ನೀಡಬೇಕು ಎಂದಿದ್ದಾರೆ. ಜೊತೆಗೆ ಧೋನಿ ಈಗ ವೇಗವಾಗಿ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ ಎಂದಿದ್ದಾರೆ.

chris-gayle-has-to-open-the-batting-gautam-gambhir
ಪಂಜಾಬ್​ ಪರ ಕ್ರಿಸ್​​ ಗೇಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಬೇಕು: ಗಂಭೀರ್​​​

By

Published : Sep 16, 2021, 9:49 AM IST

ಮುಂಬೈ:ದುಬೈನಲ್ಲಿ ಉಳಿದ ಐಪಿಎಲ್ ಪಂದ್ಯಗಳಿಗೆ ದಿನಗಣೆ ಆರಂಭವಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ತಂಡ ಬಲಿಷ್ಠ ಬ್ಯಾಟಿಂಗ್ ಪಡೆಯಿಂದ ಕೂಡಿದೆ. ಈ ನಡುವೆ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಆರಂಭಿಕರಾಗಿ ಪಂಜಾಬ್ ಪರ ಮೈದಾನಕ್ಕಿಳಿಯಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಗೇಲ್ ನಿಮ್ಮ ತಂಡದಲ್ಲಿದ್ದರೆ ಅವರನ್ನ ಮೂರನೇ ಕ್ರಮಾಂದಲ್ಲಿ ಆಡಲು ಏಕೆ ಬಯಸುತ್ತೀರಿ. ಅವರಿನ್ನೂ ಉತ್ತಮ ಪ್ರದರ್ಶನ ನೀಡಲಿದ್ದಾರೆ. ವೆಸ್ಟ್ ಇಂಡೀಸ್​​ ಹಾಗೂ ಪಂಜಾಬ್ ತಂಡದಲ್ಲಿ ಅವರಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸುವುದು ಸಮಂಜಸವಲ್ಲ. ಅವರನ್ನು ಆರಂಭಿಕರಾಗಿ ಮೈದಾನಕ್ಕಿಳಿಸಬೇಕು ಎಂದಿದ್ದಾರೆ. ಆರಂಭಿಕರಾಗಿ ಮೈದಾನಕ್ಕಿಳಿದರೆ ಅವರು ಬಾಲ್​ ವೇಸ್ಟ್​ ಮಾಡುವುದಿಲ್ಲ. ಆದರೆ, ಮೂರನೇ ಕ್ರಮಾಂಕದಲ್ಲಿ ಅವರು ಹೆಚ್ಚು ಸಿಂಗಲ್ಸ್​ ಪಡೆಯಬೇಕಾಗುತ್ತದೆ ಎಂದಿದ್ದಾರೆ.

ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾದ ಬಳಿಕ ಅವರಿಗೆ ವೇಗವಾಗಿ ರನ್ ಗಳಿಸುವುದು ಕಷ್ಟವಾಗುತ್ತಿದೆ. ಧೋನಿ 4ನೇ ಮತ್ತು 5ನೇ ಕ್ರಮಾಂಕದ ಆಟಗಾರ ಆದರೆ, ಕೆಲವು ಬಾರಿ ಅವರು 6 ಮತ್ತು 7ನೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಇಳಿಯುವುದನ್ನು ನಾನು ನೋಡಿದ್ದೇನೆ. ಅವರು ತಂಡವನ್ನು ಮುನ್ನಡೆಸಲು ಅಥವಾ ಆಟಗಾರರಿಗೆ ಮಾರ್ಗದರ್ಶನ ನೀಡಲು ಹೆಚ್ಚು ಬಯಸುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

ಧೋನಿಗೆ ಕಷ್ಟವಾಗುತ್ತಿದೆ ಏಕೆಂದರೆ ನೀವು ಒಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರೆ, ಐಪಿಎಲ್ ತುಂಬಾ ಕಠಿಣ ಟೂರ್ನಮೆಂಟ್ ಆಗುತ್ತದೆ. ಐಪಿಎಲ್‌ನಲ್ಲಿ ನೀವು ಉತ್ತಮ ಗುಣಮಟ್ಟದ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಐಪಿಎಲ್​ನಲ್ಲಿ 'ಸಾಫ್ಟ್​ ಸಿಗ್ನಲ್​' ನಿಯಮ ರದ್ಧತಿಗೆ ನಿರ್ಧಾರ: ಗವಾಸ್ಕರ್​ ಸಂತಸ

ABOUT THE AUTHOR

...view details