ಲಂಡನ್(ಯುಕೆ):ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಆರ್ಭಟ ಮುಂದುವರೆದಿದೆ. ಸೆಸೆಕ್ಸ್ ತಂಡದ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಲಾರ್ಡ್ಸ್ ಮೈದಾನದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ತಂಡದ ಪರ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಮೂರನೇ ದ್ವಿಶತಕ ಅವರ ಬ್ಯಾಟ್ನಿಂದ ಸಿಡಿದಿದೆ.
ಸಸೆಕ್ಸ್ ತಂಡದ ಖಾಯಂ ನಾಯಕ ಟಾಮ್ ಹೈನ್ಸ್ ಗಾಯಗೊಂಡಿರುವ ಕಾರಣ ಚೇತೇಶ್ವರ್ ಪೂಜಾರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಮಿಡಲ್ಸೆಕ್ಸ್ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸದ್ಯ 156 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 103 ರನ್ ಬಾರಿಸಿದ್ದ ಈ ಪ್ಲೇಯರ್, 368 ಎಸೆತಗಳಲ್ಲಿ 200ರನ್ಗಳಿಸಿದರು. ಇದಾದ ಬಳಿಕ ಸಹ ಬ್ಯಾಟಿಂಗ್ ಮುಂದುವರೆಸಿ 231ರನ್ಗಳಿಗೆ ಆಲೌಟ್ ಆದರು. ಈ ಮೂಲಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 500+ರನ್ಗಳಿಕೆ ಮಾಡಿದೆ.