ಮುಂಬೈ: ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮತ್ತು ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಒಂದೇ ತಂಡದ ಪರ ಕಣಕ್ಕಿಳಿದಿದ್ದಾರೆ. ಇಂಗ್ಲೆಂಡ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸಸೆಕ್ಸ್ ಕ್ಲಬ್ ಪರ ಭಾರತ-ಪಾಕಿಸ್ತಾನ ಆಟಗಾರರು ಒಟ್ಟಿಗೆ ಪದಾರ್ಪಣೆ ಮಾಡಿದ್ದಾರೆ. ಚೇತೇಶ್ವರ್ ಪೂಜಾರ ಈಗಾಗಲೇ ಕೌಂಟಿ ಕ್ರಿಕೆಟ್ನಲ್ಲಿ ಯಾರ್ಕ್ಶೈರ್, ಡರ್ಬಿಶೈರ್ ಮತ್ತು ನಾಟಿಂಗಮ್ಶೈರ್ ಕ್ಲಬ್ಗಳ ಪರ ಆಡಿದ ಅನುಭವವಿದೆ. ಇದೀಗ ಸಸೆಕ್ಸ್ ಪರ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಇದೇ ರಿಜ್ವಾನ್ ಮೊದಲ ಬಾರಿಗೆ ಕೌಂಟಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಟಾಮ್ ಹೈನ್ಸ್ ನಾಯಕತ್ವದಲ್ಲಿ ಪೂಜಾರ ಮತ್ತು ರಿಜ್ವಾನ್ ಕಣಕ್ಕಿಳಿಯುತ್ತಿದ್ದಾರೆ. ಇಂದಿನಿಂದ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡರ್ಬಿಶೈರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವುದರಿಂದ 2ನೇ ದಿನ ಪೂಜಾರ ಮತ್ತು ರಿಜ್ವಾನ್ ಒಟ್ಟಿಗೆ ಬ್ಯಾಟಿಂಗ್ ಮಾಡುವುದನ್ನು ನೋಡಬಹುದಾಗಿದೆ.