ಲಂಡನ್: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಚೇತೇಶ್ವರ್ ಪೂಜಾರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಸಸೆಕ್ಸ್ ಪರ ಆಡಿರುವ ಮೂರು ಪಂದ್ಯಗಳಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಫಾರ್ಮ್ ಸಮಸ್ಯೆಯಿಂದ ಟೀಮ್ ಇಂಡೀಯಾದಿಂದ ಹೊರಬಿದ್ದಿರುವ ಪೂಜಾರ ಮತ್ತೆ ತಂಡ ಸೇರಿಕೊಳ್ಳುವುದಕ್ಕೆ ಶ್ರಮಿಸುತ್ತಿದ್ದಾರೆ. ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡುವ ಮೂಲಕ ಕಳೆದುಕೊಂಡಿರುವ ತಮ್ಮ ಬ್ಯಾಟಿಂಗ್ ಚಾರ್ಮ್ಅನ್ನು ಮರಳಿ ಪಡೆದಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ದಿ ವಾಲ್ ಎಂದೇ ಖ್ಯಾತರಾಗಿರುವ ಪೂಜಾರ ಡುರಮ್ ವಿರುದ್ಧ ನಡೆಯಿತ್ತಿರುವ ಪಂದ್ಯದಲ್ಲಿ ಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶುಕ್ರವಾರ ಪೂಜಾರ 162 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದರು. ದಿನದಂತ್ಯಕ್ಕೆ 198 ಎಸೆತಗಳಲ್ಲಿ 16 ಬೌಂಡರಿ ಸಹಿತ ಅಜೇಯ 128 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಭಾರತೀಯ ಬ್ಯಾಟರ್ ತಮ್ಮ ಅದ್ಭುತ ಶತಕ ಸಿಡಿಸುವ ಮೂಲಕ ಡುರಮ್ ವಿರುದ್ಧ ಸಸೆಕ್ಸ್ 100 + ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾಗಿದ್ದಾರೆ.