ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ಪ್ರವಾಸ: ಕ್ವಾರಂಟೈನ್ ಪಾರ್ಟ್ನರ್​ ಪರಿಚಯಿಸಿದ ಚೇತೇಶ್ವರ್​ ಪೂಜಾರ

ಭಾರತ ತಂಡ ಮುಂಬೈನಲ್ಲಿ 8 ದಿನಗಳ ಕ್ವಾರಂಟೈನ್ ಮುಗಿಸಿದ ನಂತರ ಇಂಗ್ಲೆಂಡ್​ಗೆ ತೆರಳಲಿದ್ದು, ಸೌತಾಂಪ್ಟನ್​ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದೆ. ಆದರೆ, ಆಟಗಾರರು ಅಭ್ಯಾಸ ಮಾಡಲು ಸೌತಾಂಪ್ಟನ್​ ಸ್ಟೇಡಿಯಂನಲ್ಲಿ ಅವಕಾಶ ಮಾಡಿ ಕೊಡಲಾಗಿದೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ

By

Published : May 25, 2021, 5:23 PM IST

ಮುಂಬೈ: ಭಾರತ ತಂಡದ ಬ್ಯಾಟ್ಸ್​ಮನ್​ ಚೇತೇಶ್ವರ್​ ಪೂಜಾರ್ ಇಂಗ್ಲೆಂಡ್ ಪ್ರವಾಸಕ್ಕೂ ಮುಂಬೈನಲ್ಲಿ ಕಠಿಣ ಕ್ವಾರಂಟೈನ್​ಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಸಮಯ ಕಳೆಯಲು ತಮ್ಮ ಮುದ್ದಾದ ಮಗಳು ಸಹಾಯ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

ಭಾರತ ಮಹಿಳಾ ಮತ್ತು ಪುರುಷರ ತಂಡ ಜೂನ್​ 2ರಂದು ವಿಶೇಷ ವಿಮಾನದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅದಕ್ಕೂ ಮುನ್ನ ಮುಂಬೈನಲ್ಲಿ 8 ದಿನಗಳ ಕಠಿಣ ಕ್ವಾರಂಟೈನ್​ಗೆ ಒಳಗಾಗಿದೆ. ಈ ಸಂದರ್ಭದಲ್ಲಿ ಎಲ್ಲ ಆಟಗಾರರಿಗೂ ಸಮಯ ಕಳೆಯುವುದು ಒಂದು ದೊಡ್ಡ ಸವಾಲಾಗಿದೆ. ಕುಟುಂಬದ ಜೊತೆಗಿರುವ ಪೂಜಾರಾಗೆ ಮಾತ್ರ ಅದು ತುಂಬಾ ಸುಲಭವಾಗಿದೆ.

ಹೌದು, ಪೂಜಾರ ಕ್ವಾರಂಟೈನ್ ಸಮಯವನ್ನು ತಮ್ಮ ಮಗಳು ಅದಿತಿ ಜೊತೆಗೆ ಕಳೆಯುತ್ತಿದ್ದಾರೆ. ಈ ವೇಳೆ, ಸಮಯ ಕಳೆಯಲು ವಿಡಿಯೋ ಗೇಮ್​​ ಆಡುತ್ತಿದ್ದು, ತಮಗೆ ತಮ್ಮ ಮಗಳು ಜೊತೆಯಾಗಿದ್ದಾಳೆ ಎಂದು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಪೂಜಾರ ಮತ್ತು ಅದಿತಿ ವಿಡಿಯೋ ಗೇಮ್ ಆಡುತ್ತಿದ್ದಾರೆ, ಅದಿತಿ ಚೆನ್ನೈ ಸೂಪರ್ ಕಿಂಗ್ಸ್​ ಜರ್ಸಿ ತೊಟ್ಟಿರುವುದು ವಿಶೇಷ ಆಕರ್ಷಣೀಯವಾಗಿದೆ.

ಭಾರತ ತಂಡ ಮುಂಬೈನಲ್ಲಿ 8 ದಿನಗಳ ಕ್ವಾರಂಟೈನ್ ಮುಗಿಸಿದ ನಂತರ ಇಂಗ್ಲೆಂಡ್​ಗೆ ತೆರಳಲಿದ್ದು, ಸೌತಾಂಪ್ಟನ್​ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದೆ. ಆದರೆ, ಆಟಗಾರರು ಅಭ್ಯಾಸ ಮಾಡಲು ಸೌತಾಂಪ್ಟನ್​ ಸ್ಟೇಡಿಯಂನಲ್ಲಿ ಅವಕಾಶ ಮಾಡಿ ಕೊಡಲಾಗಿದೆ.

ಜೂನ್ 18ರಂದಿಂದ 22ರವರೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್ ನಡೆದರೆ, ಆಗಸ್ಟ್​ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಲಿದೆ.

ಇದನ್ನು ಓದಿ: ಕ್ರಿಕೆಟ್​ಗೆ ಭಾರತದ ಅಗತ್ಯವಿದೆ, ಅವರ ಪ್ರದರ್ಶನದಿಂದಲೇ ಟೆಸ್ಟ್​ ಇನ್ನೂ ಜೀವಂತವಾಗಿದೆ : ರಿಚರ್ಡ್​ ಹ್ಯಾಡ್ಲಿ

ABOUT THE AUTHOR

...view details