ಕರ್ನಾಟಕ

karnataka

ETV Bharat / sports

ಕೌಂಟಿಯಲ್ಲಿ 3 ಪಂದ್ಯಗಳಲ್ಲಿ 531 ರನ್; ಅಜರುದ್ದೀನ್ ದಾಖಲೆ ಸರಿಗಟ್ಟಿದ ಪೂಜಾರ - ಸಸೆಕ್ಸ್​ ಪರ ಪೂಜಾರ 2 ದ್ವಿಶತಕ

ಪೂಜಾರ ಅವರಿಗಿಂತ ಮೊದಲು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈ ಸಾಧನೆ ಮಾಡಿದ್ದರು. 1991ರಲ್ಲಿ ಲೈಲೆಸ್ಟರ್​ಶೈರ್ ವಿರುದ್ಧ 212 ಮತ್ತು 1994ರಲ್ಲಿ ಡುರ್ಹಾಮ್ ವಿರುದ್ಧ 205 ರನ್​ಗಳಿಸಿದ್ದರು.

cheteshwar pujara becomes 2nd indian to score two double centuries in county hampi
ಚೇತೇಶ್ವರ್ ಪೂಜಾರ ದ್ವಿಶತಕ

By

Published : Apr 30, 2022, 8:53 PM IST

ಲಂಡನ್:ಭಾರತ ತಂಡದ ಅನುಭವಿ ಬ್ಯಾಟರ್​ ಇಂಗ್ಲೆಂಡ್​ನ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ರನ್​ಗಳ ಹೊಳೆಯನ್ನೇ ಹರಿಸಿದ್ದಾರೆ. ಸಸೆಕ್ಸ್ ಪರ ಆಡುತ್ತಿರುವ ಅವರು 3 ಪಂದ್ಯಗಳಲ್ಲಿ 2 ದ್ವಿಶತಕ ಮತ್ತು ಒಂದು ಶತಕದ ಸಹಿತ 531 ರನ್​ಗಳಿಸಿದ್ದಾರೆ. ಕೌಂಟಿ ಚಾಂಪಿಯನ್​ಶಿಪ್​ನಲ್ಲಿ 2 ದ್ವಿಶತಕ ಸಿಡಿಸಿ ಭಾರತದ 2ನೇ ಬ್ಯಾಟರ್​ ಎಂಬ ಶ್ರೇಯಕ್ಕೂ ಪಾತ್ರರಾದರು.

ಪೂಜಾರ ಡುರಮ್​ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 203 ರನ್​​ಗಳಿಸುವ ಮೂಲಕ ಟೂರ್ನಿಯಲ್ಲಿ 2ನೇ ದ್ವಿಶತಕ ಸಿಡಿಸಿದರು. 334 ಎಸೆತಗಳನ್ನೆದುರಿಸಿದ ಅವರು 24 ಬೌಂಡರಿಗಳನ ಸಹಿತ 203 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಪೂಜಾರ ಅವರ ಅಮೋಘ ದ್ವಿಶತಕದ ನೆರವಿನಿಂದ ಸಸೆಕ್ಸ್​ 315 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿತು. ಡುರಮ್​ ಮೊದಲ ಇನ್ನಿಂಗ್ಸ್​ನಲ್ಲಿ 223 ರನ್​ಗಳಿಗೆ ಆಲೌಟ್ ಆಗಿತ್ತು.

ಚೇತೇಶ್ವರ್​ ಪೂಜಾರ ಸಸೆಕ್ಸ್ ಪರ ಪದಾರ್ಪಣೆ ಪಂದ್ಯದಲ್ಲಿ ಡರ್ಬಿಶೈರ್ ವಿರುದ್ಧ 6 ಮತ್ತ ಅಜೇಯ 201 ರನ್​, 2ನೇ ಪಂದ್ಯದಲ್ಲಿ ವೋರ್ಸೆಸ್ಟರ್‌ಶೈರ್ ವಿರುದ್ಧ 109 ಮತ್ತು 12 ರನ್​ಗಳಿಸಿದ್ದರು.

ಅಜರುದ್ದೀನ್ ದಾಖಲೆ ಸರಿಗಟ್ಟಿದ ಪೂಜಾರ:ಕೌಂಟಿ ಚಾಂಪಿಯನ್ ಚಾಂಪಿಯನ್​ಶಿಪ್​ನಲ್ಲಿ 2 ದ್ವಿಶತಕ ಸಿಡಿಸಿದ 2ನೇ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು. ಇದಕ್ಕೂ ಮುನ್ನ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈ ಸಾಧನೆ ಮಾಡಿದ್ದರು. 1991ರಲ್ಲಿ ಲೈಲೆಸ್ಟರ್​ಶೈರ್ ವಿರುದ್ಧ 212 ಮತ್ತು 1994ರಲ್ಲಿ ಡುರ್ಹಾಮ್ ವಿರುದ್ಧ 205 ರನ್​ಗಳಿಸಿದ್ದರು. ಎರಡೂ ಬಾರಿಯೂ ಡರ್ಬಿಶೈರ್ ತಂಡವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ:ಆರ್​ಸಿಬಿಯಿಂದ ಜಯ ಕಸಿದುಕೊಂಡ ತೆವಾಟಿಯಾ-ಮಿಲ್ಲರ್​.. ಪ್ಲೇ ಆಫ್​ಗೆ ಹತ್ತಿರವಾದ ಟೈಟನ್ಸ್​

ABOUT THE AUTHOR

...view details