ಜೋಧಪುರ್(ರಾಜಸ್ಥಾನ): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಯಂಗ್ ಪ್ಲೇಯರ್ ಚೇತನ್ ಸಕಾರಿಯಾಗೆ 1.2 ಕೋಟಿ ರೂ. ನೀಡಿ ಖರೀದಿ ಮಾಡಿದ್ದು, ಆ ಹಣ ಯಾವುದಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನ ಶೇರ್ ಮಾಡಿಕೊಂಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಮೊಟಕುಗೊಂಡಿದ್ದು, ಹೀಗಾಗಿ ಎಲ್ಲ ಪ್ಲೇಯರ್ಸ್ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಸದ್ಯ ಐಪಿಎಲ್ನಲ್ಲಿ ಭಾಗಿಯಾಗಿದ್ದ ಯಂಗ್ ಪ್ಲೇಯರ್ ಚೇತನ್ ಸಕಾರಿಯಾ ತಂದೆಯ ಆರೈಕೆಯಲ್ಲಿ ಮಗ್ನರಾಗಿದ್ದಾರೆ. ಚೇತನ್ ಸಕಾರಿಯಾ ತಂದೆಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಐಪಿಎಲ್ನಲ್ಲಿ ತಮಗೆ ಬಂದಿರುವ ಹಣವನ್ನ ಅದಕ್ಕಾಗಿ ಖರ್ಚು ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.