ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್-ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ ಪಡೆ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ಗಳಿಕೆ ಮಾಡಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಷ್ ಪಾಂಡೆ ಶತಕದಾಟವಾಡಿ ಎದುರಾಳಿ ತಂಡಕ್ಕೆ 172ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ್ದಾರೆ.
ವಾರ್ನರ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋ ಮತ್ತೊಮ್ಮೆ ನಿರಾಸೆ ಮೂಡಿಸಿದರು. ತಾವು ಎದುರಿಸಿದ 5 ಎಸೆತಗಳಲ್ಲಿ 7ರನ್ಗಳಿಕೆ ಮಾಡಿ ಸ್ಯಾಮ್ ಕರ್ರನ್ ಓವರ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಕ್ಯಾಪ್ಟನ್ ವಾರ್ನರ್ ಸೇರಿಕೊಂಡ ಮನೀಷ್ ಪಾಂಡೆ ಎದುರಾಳಿ ಬೌಲರ್ಗಳನ್ನ ಉತ್ತಮವಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 100 ರನ್ಗಳ ಜೊತೆಯಾಟವಾಡಿತು.
57 ರನ್ಗಳಿಸಿದ್ದ ವೇಳೆ ವಾರ್ನರ್ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ 61ರನ್ಗಳಿ ಆಡುತ್ತಿದ್ದ ಮನೀಷ್ ಪಾಂಡೆ, ನಿಗ್ಡಿ ಓವರ್ನಲ್ಲಿ ಡುಪ್ಲೆಸಿಗೆ ಕ್ಯಾಚ್ ನೀಡಿದರು. ಈ ವೇಳೆ, ತಂಡದ ಸ್ಕೋರ್ 17 ಓವರ್ಗಳಲ್ಲಿ 134ರನ್. ಈ ವೇಳೆ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಒಂದೇ ಓವರ್ನಲ್ಲಿ 20ರನ್ ಗಳಿಸಿ ತಂಡದ ಮೊತ್ತ ಮತ್ತಷ್ಟು ಹೆಚ್ಚಿಸಿದರು. ವಿಲಿಯಮ್ಸನ್ 10 ಎಸೆತಗಳಲ್ಲಿ 26 ರನ್ ಹಾಗೂ ಜಾಧವ್ 4 ಎಸೆತಗಳಲ್ಲಿ 12ರನ್ಗಳಿಕೆ ಮಾಡಿದ್ದರಿಂದ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171ರನ್ ಗಳಿಸಿದೆ. ಚೆನ್ನೈ ತಂಡದ ಪರ ನಿಗ್ಡಿ 2ವಿಕೆಟ್ ಪಡೆದುಕೊಂಡರೆ, ಚಹರ್, ಕರ್ರನ್, ಠಾಕೂರ್ ಹಾಗೂ ಜಡೇಜಾ ತಲಾ 1ವಿಕೆಟ್ ಪಡೆದುಕೊಂಡರು.