ಶಾರ್ಜಾ, ಯುಎಇ: ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲು ಅನುಭವಿಸಿದೆ. ಆರ್‌ಸಿಬಿ ನೀಡಿದ್ದ 156 ರನ್ಗಳ ಮೊತ್ತವನ್ನು ಬೆನ್ನತ್ತಿದ ಸಿಎಸ್ಕೆ 18.1 ಓವರ್ಗಳಲ್ಲಿ ಪಂದ್ಯ ತನ್ನದಾಗಿಸಿಕೊಂಡಿದೆ.
ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟವಾಡಿದ್ದರು. ವಿರಾಟ್ ಕೊಹ್ಲಿಯ 53 ರನ್ ಮತ್ತು ದೇವದತ್ ಪಡಿಕ್ಕಲ್ ಅವರ 70 ರನ್ಗಳ ಹೋರಾಟ ವ್ಯರ್ಥವಾಗಿದೆ. ಈ ಜೋಡಿ 11 ಓವರ್ಗಳಲ್ಲಿ 111 ರನ್ ಗಳಿಸಿ, ತಂಡ ಉತ್ತಮ ರನ್ ಗಳಿಸುವಂತೆ ಮಾಡಿತು.
ಇದರ ಜೊತೆಗೆ ಡಿವಿಲಿಯರ್ಸ್ 12, ಗ್ಲೆನ್ ಮ್ಯಾಕ್ಸ್ವೆಲ್ 11 ರನ್ಗಳನ್ನು ಗಳಿಸಿ, ಪೆವಿಲಿಯನ್ಗೆ ತೆರಳಿದ್ದು, ಟಿಮ್ ಡೇವಿಡ್ ಕೇವಲ 1 ರನ್ಗಳಿಸಿದ್ರೆ, ಹರ್ಷಲ್ ಪಟೇಲ್ 3 ರನ್ ಮಾತ್ರ ಗಳಿಸಿದ್ದರು.