ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ದುಬೈ ತಲುಪಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇದೀಗ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2024 ಟ್ರೋಫಿಯನ್ನು ವಶಪಡಿಸಿಕೊಳ್ಳಲು ಬಯಸಿದೆ. ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸುವ ಮೂಲಕ ಸಿಎಸ್‌ಕೆ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು. ಈಗ ಹಾಲಿ ಚಾಂಪಿಯನ್ ಸಿಎಸ್‌ಕೆ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಹರಾಜಿನಲ್ಲಿ ಪಾಲ್ಗೊಳ್ಳುತ್ತಾರಾ ಮಾಹಿ: ಧೋನಿ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಈ ಹರಾಜಿನಲ್ಲಿ ಒಟ್ಟು 333 ಆಟಗಾರರಿದ್ದು, 77 ಖಾಲಿ ಸ್ಥಾನಗಳಿಗೆ ಖರೀದಿ ನಡೆಯಲಿದೆ. ಹೀಗಿರುವಾಗ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಮಹತ್ವದ ರಣತಂತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಈ ಹರಾಜಿನಲ್ಲಿ, ಟ್ರೋಫಿಯನ್ನು ಗೆಲ್ಲುವಲ್ಲಿ ತನ್ನ ತಂಡಕ್ಕೆ ಪ್ರಮುಖ ಕೊಡುಗೆ ನೀಡುವ ಆಟಗಾರರ ಮೇಲೆ ಬಿಡ್ ಮಾಡಲು ಕ್ಯಾಪ್ಟನ್ ಕೂಲ್ ಚಿಂತಿಸಿದಂತಿದೆ. ಹೀಗಾಗಿ ಹರಾಜಿನಲ್ಲಿ ತಂಡದ ಸದಸ್ಯರ ಜೊತೆ ಧೋನಿಯು ಇರುವ ಸಾಧ್ಯತೆ ಇದೆ.
ತಂಡದ ಬಿಡ್ ಮಾಡುವ ಪ್ರಮುಖ ಆಟಗಾರರು:ಧೊನಿಗೆ ಇದು ಕೊನೆಯ ಐಪಿಎಲ್ ಆವೃತ್ತಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಗೆಲುವಿನ ವಿದಾಯಕ್ಕೆ ಬಲಿಷ್ಠ ತಂಡಕ್ಕೆ ಚೆನ್ನೈ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಬಳಿ 31.4 ಕೋಟಿ ರೂ ಹಣ ಇದ್ದು, 3 ವಿದೇಶಿ ಆಟಗಾರರು ಸೇರಿ ಒಟ್ಟು 6 ಜನ ತಂಡಕ್ಕೆ ಬೇಕಾಗಿದೆ. ಸ್ಪಿನ್ ಹಾಗೂ ವೇಗಿಗಳ ಹುಡುಕಾಟದಲ್ಲಿ ತಂಡ ಇದ್ದು, ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮೇಲೆ ಕಣ್ಣಿಟ್ಟಂತಿದೆ. ಏಕೆಂದರೆ ಶಾರ್ದೂಲ್ ಠಾಕೂರ್ ತಂಡದ ಮಾಜಿ ಆಟಗಾರರ ಮತ್ತು ಧೋನಿಯ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಈ ವರ್ಷ ಶಾರ್ದೂಲ್ ಅವರನ್ನು ಕೈಬಿಟ್ಟಿತು. ಠಾಕೂರ್ ಐಪಿಎಲ್‌ನಲ್ಲಿ 89 ವಿಕೆಟ್ ಪಡೆದಿದ್ದು, 286 ರನ್ ಕೂಡ ಗಳಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ನಿವೃತ್ತಿ ಪ್ರಕಟಿಸಿದ ಅಂಬಟಿ ರಾಯುಡು ಬದಲಿಗೆ ಭಾರತೀಯ ಆಟಗಾರನ ಹುಡುಕಾಟದಲ್ಲಿ ತಂಡ ಇದೆ. ಅಂಬಟಿ ಜಾಗಕ್ಕೆ ಮನೀಶ್ ಪಾಂಡೆಯನ್ನು ಸಿಎಸ್‌ಕೆ ಬಿಡ್ ಮಾಡುವ ನಿರೀಕ್ಷೆ ಇದೆ. ವೇಗದ ಬೌಲಿಂಗ್ ವಿಭಾಗ ಬಲಿಷ್ಠಗೊಳಿಸಲು ವಿದೇಶಿ ಆಟಗಾರರ ಪೈಕಿ ಅನುಭವಿ ಜೋಶ್ ಹ್ಯಾಜಲ್ವುಡ್ಗೆ ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:2024ರ ಐಪಿಎಲ್ ಹರಾಜು: ತಂಡಗಳು ಯಾವ ಆಟಗಾರರ ಮೇಲೆ ಕಣ್ಣಿಟ್ಟಿವೆ...