ಹೈದರಾಬಾದ್:2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ಗೆ ಸಂತೋಷಕ್ಕಿಂತಲೂ ದುಃಖವನ್ನೇ ಹೆಚ್ಚಾಗಿ ನೀಡಿದೆ. ಕಾರಣವಿಲ್ಲದೇ ನಾಯಕತ್ವ ಕಿತ್ತುಕೊಳ್ಳುವುದರ ಜೊತೆಗೆ ಆಡುವ 11ರ ಬಳಗದಿಂದಲೂ ಕೈಬಿಡಲಾಗಿತ್ತು. ಇದೇ ವಿಚಾರವಾಗಿ ಈಗಾಗಲೇ ಅನೇಕ ಸಲ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ವಾರ್ನರ್ಗೆ ಇದೀಗ ಫ್ರಾಂಚೈಸಿ ತಂಡದಿಂದ ಕೊಕ್ ನೀಡಿದೆ.
2016ರಿಂದಲೂ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ವಾರ್ನರ್ ತಂಡಕ್ಕಾಗಿ ಅನೇಕ ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ, ಗೆಲುವಿನ ದಡ ಸೇರಿಸಿದ್ದರು. ಇದರ ಜೊತೆಗೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಿದ್ದರು. ಆದರೆ ಈ ಸಲ ಭಾರತದಲ್ಲಿ ನಡೆದ ಟೂರ್ನಿಯಲ್ಲಿ ವಾರ್ನರ್ ವಿಫಲಗೊಳ್ಳುತ್ತಿದ್ದಂತೆ ನಾಯಕತ್ವ ಜವಾಬ್ದಾರಿ ಹಾಗೂ ಆಡುವ 11ರ ಬಳಗದಿಂದ ಹೊರಗಿಡಲಾಗಿತ್ತು.