ಜೋಧಪುರ(ರಾಜಸ್ತಾನ):ಕೆಲ ದಿನಗಳ ಹಿಂದಷ್ಟೇ ಐಪಿಎಲ್ನ ಹೊಸ ತಂಡವಾದ ಲಖನೌಗೆ 4 ಕೋಟಿ ರೂಪಾಯಿಗೆ ಬಿಕರಿಯಾಗಿದ್ದ ಯುವ ಕ್ರಿಕೆಟಿಗ, ಸ್ಪಿನ್ನರ್ ರವಿ ಬಿಷ್ನೋಯ್ ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
21 ವರ್ಷದ ರವಿ ಬಿಷ್ಣೋಯ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ರವಿಯನ್ನು ತಂಡ ಕೈಬಿಟ್ಟ ಬಳಿಕ ಇದೀಗ ಲಖನೌ ತಂಡ 4 ಕೋಟಿಗೆ ಹರಾಜಿಗೂ ಮುನ್ನವೇ ಖರೀದಿಸಿದೆ.
ರವಿ ಬಿಷ್ಣೋಯ್ ಪಂಜಾಬ್ ಪರ 23 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 2020 ರಲ್ಲಿ ಭಾರತ ಅಂಡರ್-19 ತಂಡದಲ್ಲೂ ಆಟವಾಡಿದ ಅನುಭವ ಹೊಂದಿದ್ದಾರೆ.