ಗಯಾನ (ವೆಸ್ಟ್ ಇಂಡೀಸ್): ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಟ್ರಿಬಾಂಗೊ ನೈಟ್ ರೈಡರ್ಸ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಗಯಾನಾ ವಾರಿಯರ್ಸ್ ಅಂತಿಮವಾಗಿ ತಮ್ಮ ಆರನೇ ಫೈನಲ್‌ನಲ್ಲಿ ತಮ್ಮ ಮೊದಲ ಕೆರಿಬಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಗಯಾನಾ ಅಮೆಜಾನ್ ವಾರಿಯರ್ಸ್ ಈ ಮೊದಲು ಐದು ಬಾರಿ ಸಿಪಿಎಲ್ ಫೈನಲ್‌ನಲ್ಲಿ ಆಡಿದ್ದಾರೆ. ಆದರೆ ಅವರು ಪ್ರತಿ ಬಾರಿಯೂ ರನ್ನರ್ ಅಪ್ಆಗಿ ಹೊರಹೊಮ್ಮಿತ್ತು. ಇಮ್ರಾನ್ ತಾಹಿರ್ ನೇತೃತ್ವದ ತಂಡ ಈ ವರ್ಷ ತಮ್ಮ ಅದೃಷ್ಟವನ್ನು ಬದಲಿಸಿದೆ ಮತ್ತು 11ನೇ ಆವೃತ್ತಿಯಲ್ಲಿ ತಮ್ಮ ಮೊದಲ ಸಿಪಿಎಲ್ ಪ್ರಶಸ್ತಿಯನ್ನು ಜಯಿಸಿದೆ.
ಲೀಗ್ ಹಂತದಲ್ಲಿ ಒಂದೇ ಒಂದು ಪಂದ್ಯ ಸೋತ ವಾರಿಯರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅವರು ಮೊದಲ ಕ್ವಾಲಿಫೈಯರ್‌ನಲ್ಲಿ ಟ್ರಿನಿಡಾಡ್ ನೈಟ್ ರೈಡರ್ಸ್‌ಗೆ ಸೋತರು. ಆದರೆ ಅವರು ಕ್ವಾಲಿಫೈಯರ್ 2ನಲ್ಲಿ ಜಮೈಕಾ ತಲ್ಲಾವಾಸ್ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಕೀರನ್ ಪೊಲಾರ್ಡ್ ನೇತೃತ್ವದ ನೈಟ್ಸ್, ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಐದನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿ ಟ್ರಿಬಾಂಗೊ ನೈಟ್ ರೈಡರ್ಸ್ ಕೇವಲ 94 ರನ್ಗೆ ಆಲ್ಔಟ್ ಆದರು.