ಕರ್ನಾಟಕ

karnataka

ETV Bharat / sports

ನಾಯಕತ್ವ ಒಂದು ಜವಾಬ್ದಾರಿ ಹೊರತು ಶಾಶ್ವತ ಪಟ್ಟವಲ್ಲ ; ಕೊಹ್ಲಿ ಬಗ್ಗೆ 'ಗಂಭೀರ​' - ಭಾರತ ಟಿ-20 ತಂಡದ ನಾಯಕತ್ವ

ಟೀಂ ಇಂಡಿಯಾದ ಎಲ್ಲ ಮಾದರಿಗೆ ದಿಢೀರ್​ ಎಂಬಂತೆ ನಾಯಕತ್ವ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರ ಬಗ್ಗೆ ಪರ-ವಿರೋಧ ಹೇಳಿಕೆಗಳು ಕೇಳಿ ಬರುತ್ತಿವೆ. ಮಾಜಿ ಆಟಗಾರ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ..

Captaincy just an honour and responsibility, nothing changes for Kohli: Gautam Gambhir
Captaincy just an honour and responsibility, nothing changes for Kohli: Gautam Gambhir

By

Published : Feb 1, 2022, 12:54 PM IST

ಹೊಸದಿಲ್ಲಿ :ಸಾಕಷ್ಟು ನಾಟಕೀಯ ಬೆಳವಣಿಗೆ ಬಳಿಕ ಟೀಂ ಇಂಡಿಯಾದ ಎಲ್ಲ ಫಾರ್ಮ್ಯಾಟ್‌ಗಳ ನಾಯಕನ ಸ್ಥಾನದಿಂದ ಕೆಳಗಿಳಿದಿರುವ ರನ್​​ ಮಿಷನ್​ ವಿರಾಟ್ ಕೊಹ್ಲಿ ಬಗ್ಗೆ ಭಾರತದ ಮಾಜಿ ಆಟಗಾರರು ಸೇರಿದಂತೆ ಹಲವರು ತರಹೇವಾರು ಹೇಳಿಕೆ ನೀಡಿದ್ದರು. ಇದೀಗ ಪಶ್ಚಿಮ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೆಲುವು ಅಥವಾ ಸೋಲು ನಿಮ್ಮ ಕೈಯಲ್ಲಿರಲ್ಲ, ಲೀಡರ್ ಆಗುವುದಕ್ಕೆ ನಾಯಕತ್ವದ ಅಗತ್ಯವಿಲ್ಲ: ಕೊಹ್ಲಿ

ವರ್ಷದ ಮೊದಲ ತಿಂಗಳ ಆರಂಭದಲ್ಲಿ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವದಿಂದಲೂ ದಿಢೀರ್​ ಎಂಬಂತೆ ಕೆಳಗಿಳಿದಿದ್ದು, ಈ ತತಕ್ಷಣದ ಬೆಳವಣಿಗೆಯ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಕೇಳಿದಾಗ ಗಂಭೀರ್ ಈ ರೀತಿಯಾಗಿ ಹೇಳಿದ್ದಾರೆ.

ಗೌತಮ್ ಗಂಭೀರ್

ವಿರಾಟ್ ಕೊಹ್ಲಿ ಎಲ್ಲ ಮಾದರಿಯ ನಾಯಕತ್ವ ಕಳೆದುಕೊಂಡಿರುವುದು ತಂಡದ ಮೇಲಾಗಲಿ ಅಥವಾ ಸ್ವತಃ ಅವರ ಮೇಲಾಗಲಿ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ. ಜೊತೆಗೆ ತಂಡದಲ್ಲಿ ಹಾಗೂ ವಿರಾಟ್ ಕೊಹ್ಲಿ ಆಟದಲ್ಲಿ ಹೆಚ್ಚೇನೂ ಬದಲಾವಣೆಗಳು ಕೂಡ ಕಂಡು ಬರುವುದಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಓರ್ವ ಕ್ರಿಕೆಟಿಗ ಬಾಲ್ಯಾವಸ್ಥೆಯಿಂದ ತಾನು ಉತ್ತಮ ಕ್ರಿಕೆಟಿಗ ಆಗಬೇಕು ಎಂಬ ಕನಸನ್ನು ಹೊತ್ತು ಅಭ್ಯಾಸವನ್ನು ಆರಂಭಿಸುತ್ತಾನೆಯೇ ಹೊರತು ತಂಡದ ನಾಯಕನಾಗಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿರುವುದಿಲ್ಲ. ದೇಶಕ್ಕಾಗಿ ಮತ್ತು ತನ್ನ ತಂಡದ ಗೆಲುವಿಗಾಗಿ ಪ್ರಯತ್ನಿಸುತ್ತಿರುತ್ತಾರೆ ಅನ್ನೋದರಲ್ಲಿ ಎರುಡು ಮಾತಿಲ್ಲ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇಲ್ಲಿ ಆಗಿರುವುದು ಅದೇ ಹೊರತು ಬೇರೇನೂ ಆಗಿಲ್ಲ ಎಂದಿರುವ ಗೌತಮ್ ಗಂಭೀರ್, ನಾಯಕತ್ವ ಒಂದು ಜವಾಬ್ದಾರಿಯೇ ವಿನಃ ಶಾಶ್ವತವಾದ ಪಟ್ಟವಲ್ಲ. ಇದೇ ಮಾದರಿಯಲ್ಲಿ ವಿರಾಟ್ ಕೊಹ್ಲಿ ಕೂಡ ಯೋಚಿಸಲಿದ್ದಾರೆ ಎಂದು ಖಾತ್ರಿಯಿದೆ. ವಿರಾಟ್ ಕೊಹ್ಲಿಯಲ್ಲಿ ಬದಲಾವಣೆಗಳನ್ನೇನಾದರೂ ತಂದರೆ ಅದು ಗಂಭೀರವಾದಂತಹ ತಪ್ಪು ಎಂದಿದ್ದಾರೆ.

ಭಾರತ ಟಿ-20 ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದ ಕೊಹ್ಲಿ ಭಾರವಾದ ಮನಸ್ಸಿನಿಂದ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ಕೆಳಗಿಳಿಸಲ್ಪಟ್ಟರು. ಇದಾದ ಕೆಲವು ದಿನಗಳ ಬಳಿಕ ಸೀಮಿತ ಓವರ್ ತಂಡದ ನಾಯಕತ್ವವನ್ನೂ ತ್ಯಜಿಸಬೇಕಾಯಿತು.

ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಬೇಕಾಯಿತು. ಇದಾದ ಕೆಲ ದಿನಗಳ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಸಹ ಕೊಹ್ಲಿ ರಾಜೀನಾಮೆಯನ್ನು ಸಲ್ಲಿಸಿದರು.

ಇದನ್ನೂ ಓದಿ: ವೆಸ್ಟ್ ಇಂಡೀಸ್​ ವಿರುದ್ಧದ ಏಕದಿನ ಸರಣಿಗಾಗಿ ಅಹ್ಮದಾಬಾದ್​ಗೆ ಬಂದಿಳಿದ ಭಾರತ ತಂಡ

ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಕೆ ಎಲ್​ ರಾಹುಲ್ ನಾಯಕತ್ವದಲ್ಲಿ ವಿರಾಟ್​ ಕೊಹ್ಲಿ ಸಹ ಆಟಗಾರರಾಗಿ ತಂಡದಲ್ಲಿ ಕಾಣಿಸಿಕೊಂಡರು. ಇನ್ನು ಫೆಬ್ರವರಿಯಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಮತ್ತು ಟಿ-20 ಸರಣಿ ನಡೆಯಲ್ಲಿದ್ದು, ಅಲ್ಲಿಯೂ ಸಹ ಕೊಹ್ಲಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ABOUT THE AUTHOR

...view details