ಕರ್ನಾಟಕ

karnataka

ETV Bharat / sports

ನಿಧಾನಗತಿ ಬೌಲಿಂಗ್: ರಾಜಸ್ಥಾನ್​ ಕ್ಯಾಪ್ಟನ್‌ ಸ್ಯಾಮ್ಸನ್​​ಗೆ ₹12 ಲಕ್ಷ ದಂಡ - ರಾಜಸ್ಥಾನ್ ನಾಯಕ ಸಂಜು ಸಾಮ್ಸನ್​ಗೆ 12 ಲಕ್ಷ ದಂಡ

ನಿನ್ನೆ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 185 ರನ್​ಗಳಿಸಿತ್ತು. 186 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್ 183 ರನ್​ಗಳಿಸಲಷ್ಟೇ ಶಕ್ತವಾಗಿ 2 ರನ್​ಗಳ ಸೋಲು ಕಂಡಿತು. ಅತ್ಯಂತ ರೋಚಕವಾಗಿದ್ದ ಈ ಪಂದ್ಯದಲ್ಲಿ ರಾಜಸ್ಥಾನ್​ ತನ್ನ ನಿಗದಿತ ಸಮಯದಲ್ಲಿ ಓವರ್​ ಪೂರ್ಣಗೊಳಿಸುವುದರಲ್ಲಿ ಎಡವಿದ್ದರಿಂದ ನಾಯಕ ಸಾಮ್ಸನ್​ಗೆ ದಂಡ ವಿಧಿಸಲಾಗಿದೆ.

Captain Samson fined Rs 12 lakh for RR's slow over rate
ಸಂಜು ಸಾಮ್ಸನ್​ಗೆ ದಂಡ

By

Published : Sep 22, 2021, 3:10 PM IST

Updated : Sep 22, 2021, 3:15 PM IST

ದುಬೈ: ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ​ ಐಪಿಎಲ್ ಮಂಡಳಿ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.

ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 185 ರನ್​ಗಳಿಸಿತ್ತು. 186 ರನ್​ಗುರಿ ಬೆನ್ನತ್ತಿದ ಪಂಜಾಬ್ ತಂಡ 183 ರನ್​ಗಳಿಸಲಷ್ಟೇ ಶಕ್ತವಾಗಿ 2 ರನ್​ಗಳ ಸೋಲು ಕಂಡಿದೆ. ರೋಚಕವಾಗಿದ್ದ ಈ ಪಂದ್ಯದಲ್ಲಿ ರಾಜಸ್ಥಾನ್​ ತನ್ನ ನಿಗದಿತ ಸಮಯದಲ್ಲಿ ಓವರ್​ ಪೂರ್ಣಗೊಳಿಸುವುದರಲ್ಲಿ ಎಡವಿದ್ದು ನಾಯಕ ಸಾಮ್ಸನ್​ಗೆ ದಂಡ ವಿಧಿಸಲಾಗಿದೆ.

'ಸೆಪ್ಟೆಂಬರ್​ 21ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಪ್ರದರ್ಶನ ತೋರಿರುವುದರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್​ ಅವರಿಗೆ ತಂಡ ವಿಧಿಸಲಾಗಿದೆ' ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Ipl 2021 : ರಾಜಸ್ಥಾನ ರಾಯಲ್ಸ್​​ಗೆ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು

Last Updated : Sep 22, 2021, 3:15 PM IST

ABOUT THE AUTHOR

...view details