ಕರ್ನಾಟಕ

karnataka

ETV Bharat / sports

ಟೆಸ್ಟ್​​ ಚಾಂಪಿಯನ್​ಶಿಪ್​ ಟೀಮ್​ ಸೇರಿಕೊಂಡ ಕ್ಯಾಪ್ಟನ್​ ರೋಹಿತ್​: ಲಂಡನ್​ನಲ್ಲಿ ಅಭ್ಯಾಸ ಆರಂಭ - ಟೆಸ್ಟ್​​ ಚಾಂಪಿಯನ್​ಶಿಪ್​ ಟೀಮ್​

ಎರಡು ತಿಂಗಳ ಕಾಲ ಟಿ20 ಆಡಿ ಉತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರರು, ಜೂನ್​ 7 ರಿಂದ 11 ವರೆಗೆ ನಡೆಯಲಿರುವ ಟೆಸ್ಟ್​ಗೆ ಸಿದ್ಧತೆ ನಡೆಸಿದ್ದಾರೆ.

Captain Rohit Sharma has joined team India
ಟೀಮ್​ ಜೊತೆ ಸೇರಿಕೊಂಡ ಕ್ಯಾಪ್ಟನ್​ ರೋಹಿತ್​: ಲಂಡನ್​ನ ಅಭ್ಯಾಸ ಆರಂಭ

By

Published : May 30, 2023, 8:24 PM IST

ಸಸೆಕ್ಸ್ (ಲಂಡನ್)​: ಸುಮಾರ ಎರಡು ತಿಂಗಳ ಕಾಲ ನಡೆದ ಚುಟುಕು ಸಮಯಕ್ಕೆ ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ಗೆಲುವು ಸಾಧಿಸುವ ಮೂಲಕ ತೆರೆಬಿದ್ದಿದೆ. ಭಾರತ ತಂಡ ಲಂಡನ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಲೀಗ್​ನಿಂದ ಹೊರಗುಳಿದ ಐಪಿಎಲ್​ ತಂಡದಲ್ಲಿದ್ದ ಆಟಗಾರರು ಈಗಾಗಲೇ ಲಂಡನ್​ ಪ್ರವಾಸ ಕೈಗೊಂಡಿದ್ದು, ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಜೂನ್​ 7 ರಿಂದ 11 ವರೆಗೆ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಟೆಸ್ಟ್​​ ಚಾಂಪಿಯನ್​ ಶಿಪ್​ ಆಡಲಿದೆ.

16ನೇ ಆವೃತ್ತಿಯ ಐಪಿಎಲ್​ನಲ್ಲಿ ಪ್ಲೇ ಆಫ್​ ಪ್ರವೇಶಿಸಿ ಎಲಿಮಿನೇಟರ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋಲನುಭವಿಸಿದ ನಂತರ ಮುಂಬೈ ಇಂಡಿಯನ್ಸ್​ ಹಾಗೂ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಲಂಡನ್​ಗೆ ತೆರಳಿದ್ದಾರೆ. ಹೊಸ ಅಡಿಡಾಸ್ ಕಿಟ್​ನ ನಲ್ಲಿ ರೋಹಿತ್​ ಶರ್ಮಾ ಲಂಡನ್​ ಚಳಿಯಲ್ಲಿ ಬೆಚ್ಚಗೆ ಫೀಲ್​ ಮಾಡುತ್ತಿದ್ದಾರೆ. ಬಿಸಿಸಿಐ ಟ್ವೀಟ್​ ಮಾಡಿ "ನಾಯಕ ರೋಹಿತ್​ ಶರ್ಮಾ ಅರುಂಡೇಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಟೀಮ್​ ಇಂಡಿಯಾವನ್ನು ಸೇರಿಕೊಂಡಿದ್ದು, ತರಬೇತಿಯಲ್ಲಿ ತೊಡಗಿದ್ದಾರೆ ಎಂದು ಬರೆದುಕೊಂಡಿದೆ.

ಮೊದಲ ಟ್ರಿಪ್​ನಲ್ಲಿ ಲಂಡನ್​ಗೆ ಬಂದಿಳಿದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಚೇತೇಶ್ವರ ಪೂಜಾರ, ರವಿಚಂದ್ರನ್ ಅಶ್ವಿನ್ ಮತ್ತು ಜಯದೇವ್ ಉನಾದ್ಕತ್ ಅಭ್ಯಾಸ ಮಾಡುತ್ತಿರುವ ಫೊಟೋಗಳನ್ನು ಬಿಸಿಸಿಯ ನಿನ್ನೆ ಹಂಚಿಕೊಂಡಿತ್ತು. ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದ ಚೇತೇಶ್ವರ ಪೂಜಾರ ಸಹ ತಂಡವನ್ನು ಸೇರಿಕೊಂಡಿದ್ದಾರೆ. ಕೌಂಟಿಯಲ್ಲಿ ಪೂಜಾರ ನಾಯಕತ್ವದಲ್ಲಿ ಸಸೆಕ್ಸ್ ಉತ್ತಮ ಪ್ರದರ್ಶನವನ್ನು ನೀಡಿತ್ತು. ಪೂಜಾರ ಶತಕಗಳನ್ನು ಗಳಿಸಿ ಉತ್ತಮ ಫಾರ್ಮ್​ನ್ನಲ್ಲಿದ್ದಾರೆ.

ಬಸ್​ನಲ್ಲಿ ಐಪಿಎಲ್​ನೋಡಿದ ಟೆಸ್ಟ್​ ಟೀಮ್​:ಲಂಡನ್​ನಲ್ಲಿರುವ ಟೆಸ್ಟ್​ ತಂಡ ಐಪಿಎಲ್​ ಫೈನಲ್​ ಪಂದ್ಯವನ್ನು ಬಸ್​ನಲ್ಲಿ ವೀಕ್ಷಣೆ ಮಾಡಿದ್ದಾರೆ. ಬಿಸಿಸಿಐ ಟ್ವಿಟರ್​ನಲ್ಲಿ ಆಟಗಾರರು, ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಸಹಾಯಕ ಸಿಬ್ಬಂದಿ ಬಸ್​​ನಲ್ಲಿ ಮ್ಯಾಚ್​ ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.

ತಂಡ ಸೇರಲು ಬಾಕಿ ಇರುವ ಆಟಗಾರರು: ಐಪಿಎಲ್​ ಪೈನಲ್​ಗೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಪ್ರವೇಶ ಪಡೆದಿದ್ದರಿಂದ ಈ ಎರಡು ತಂಡದಲ್ಲಿದ್ದ ಆಟಗಾರರು ಕೊನೆಯ ಟ್ರಿಪ್​ನಲ್ಲಿ ಲಂಡನ್​ ಪ್ರವಾಸ ಮಾಡಲಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಅಂಜಿಕ್ಯಾ ರಹಾನೆ, ರವೀಂದ್ರ ಜಡೇಜಾ ಮತ್ತು ಗುಜರಾತ್​ ಟೈಟಾನ್ಸ್​ನಿಂದ ಶುಭಮನ್ ಗಿಲ್, ಕೆಎಸ್ ಭರತ್, ಮೊಹಮ್ಮದ್ ಶಮಿ ಪ್ರಯಾಣ ಬೆಳೆಸಬೇಕಿದೆ.

ಟಿ20ಯಲ್ಲಿ ಫಾರ್ಮ್​ನಲ್ಲಿರುವ ಭಾರತದ ಆಟಗಾರರು: ಎರಡು ತಿಂಗಳ ಐಪಿಎಲ್​ನಲ್ಲಿ ಭಾರತದ ಆಟಗಾರರು ಉತ್ತಮ ಫಾರ್ಮ್​ ತೋರಿದ್ದಾರೆ ಆದರೆ ಇದು ಟೆಸ್ಟ್​ಗೆ ಎಷ್ಟು ಸಹಕಾರಿ ಅಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಆರಂಭಿಕ ಶುಭಮನ್​ ಗಿಲ್​ ಈ ಆವೃತ್ತಿಯ ಅತಿ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ ಆಗಿದ್ದಾರೆ. ಚೇತೇಶ್ವರ ಪೂಜಾರ ಕೌಂಟಿ ಆಡಿ ಫಾರ್ಮ್​ನಲ್ಲಿದ್ದಾರೆ. ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಮೂರನೇ ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟರ್​ ಆಗಿದ್ದಾರೆ. ಇನ್ನೂ ಐಪಿಎಲ್​ನಲ್ಲಿ ಫಾರ್ಮ್​ಗೆ ಮರಳಿರುವ ರಹಾನೆಯನ್ನು ಟೆಸ್ಟ್​ಗೆ ಆಯ್ಕೆ ಮಾಡಲಾಗಿದೆ. ಐಪಿಎಲ್​ನಲ್ಲಿ ಶಮಿ ಈ ವರ್ಷ ಅಧಿಕ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ.

ಭಾರತದ ಟೆಸ್ಟ್ ತಂಡ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್​ ಕಿಶನ್​, ಕೆ.ಎಸ್.ಭರತ್ (ವಿಕೆಟ್​ ಕೀಪರ್​​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.

ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್​​, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್

ಇದನ್ನೂಓದಿ:ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್‌: ಸ್ಟ್ಯಾಂಡ್‌ಬೈ ಆಟಗಾರನಾಗಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶ

ABOUT THE AUTHOR

...view details