ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಕ್ಯಾಮರೂನ್ ಗ್ರೀನ್ ಚುರುಕಿನ ಆಟ ಆರಂಭ ನೀಡಿದರು. ಕ್ಯಾಮರೂನ್ ಗ್ರೀನ್ ಅವರ ಇನ್ನಿಂಗ್ಸ್ ಅನ್ನು ತಡೆಯಲು ಮೂವರೂ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ವಿಫಲರಾದರು.
ಕ್ಯಾಮರೂನ್ ಗ್ರೀನ್ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ ಭರ್ಜರಿ ಬ್ಯಾಟ್ ಬೀಸಿದರು. ಕೇವಲ 19 ಎಸೆತಗಳಲ್ಲಿ ಟಿ20ಯ ಎರಡನೇ ಅರ್ಧಶತಕ ದಾಖಲಿಸಿದರು. ಇದು ಭಾರತದ ವಿರುದ್ಧ T20I ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ವೇಗದ ಅರ್ಧಶತಕವಾಗಿದೆ. ಕ್ಯಾಮರೂನ್ ಅವರ ಇನ್ನಿಂಗ್ಸ್ ನೋಡಿ ಕಾಮೆಂಟೇಟರ್‌ನಿಂದ ಹಿಡಿದು ಅವರ ಸಹ ಆಟಗಾರರು ಕೂಡ ಆಶ್ಚರ್ಯ ಚಕಿತರಾದರು. 52 ರನ್ ಗಳಿಸಿದ್ದಾಗ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಕ್ಯಾಮರೂನ್ ಗ್ರೀನ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕ್ಯಾಮರಾನ್ ಗ್ರೀನ್ ತಮ್ಮ T20 ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಮೊಹಾಲಿಯಲ್ಲಿ ಗಳಿಸಿದರು. ಮೊಹಾಲಿಯಲ್ಲಿ ಗ್ರೀನ್ 30 ಎಸೆತಗಳಲ್ಲಿ 61 ರನ್‌ಗಳ ಗಳಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆಸ್ಟ್ರೇಲಿಯಾ ಎದುರು 209 ರನ್ ಗಳ ಬೃಹತ್ ಗುರಿ ನೀಡಿತ್ತು. ಭಾರತೀಯ ಬೌಲರ್‌ಗಳು ಬೆವರಿಸಿಳಿದ್ದ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ತಿರುಗೇಟು ನೀಡಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಮೋಘ ಪ್ರದರ್ಶನದಿಂದಾಗಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಸರಣಿ ವಶಪಡಿಸಿಕೊಂಡಿತು.
- ಭಾರತದ ವಿರುದ್ಧ ಕ್ಯಾಮರೂನ್ ಗ್ರೀನ್ ಅರ್ಧ ಶತಕ, ಹೈದರಾಬಾದ್ 2022* ರಲ್ಲಿ, 19 ಎಸೆತ
- ಭಾರತದ ವಿರುದ್ಧ ಜಾನ್ಸನ್ ಚಾರ್ಲ್ಸ್ ಅರ್ಧ ಶತಕ, ಲಾಡರ್ಹಿಲ್ 2016 ರಲ್ಲಿ 20 ಎಸೆತ
- ಭಾರತದ ವಿರುದ್ಧ ಕುಮಾರ್ ಸಂಗಕ್ಕಾರ ಅರ್ಧ ಶತಕ, ನಾಗ್ಪುರ 2009, 21 ಎಸೆತ
- ಭಾರತದ ವಿರುದ್ಧ ಹೆನ್ರಿಕ್ ಕ್ಲಾಸೆನ್ ಅರ್ಧ ಶತಕ, ಸೆಂಚೂರಿಯನ್ 2018, 22 ಎಸೆತ
- ಭಾರತದ ವಿರುದ್ಧ ಕುಸಾಲ್ ಪೆರೆರಾ ಅರ್ಧಶತಕ, ಕೊಲೊಂಬೊ 2018, 22 ಎಸೆತ
ಓದಿ:ವಿರಾಟ್, ಸೂರ್ಯಕುಮಾರ್ ಹೋರಾಟಕ್ಕೆ ಒಲಿದ ಸರಣಿ.. ಭಾರತಕ್ಕೆ 6 ವಿಕೆಟ್ ಜಯ