ಕರ್ನಾಟಕ

karnataka

ETV Bharat / sports

Nathan Lyon: ದಾಖಲೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ನಾಥನ್‌ ಲಿಯಾನ್​

ಆ್ಯಶಸ್ 2023: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 2ನೇ​ ಟೆಸ್ಟ್ ಪಂದ್ಯದ ಮೂಲಕ ಸತತ 100 ಪಂದ್ಯಗಳನ್ನು ಆಡಿದ ದಾಖಲೆ ಆಸ್ಟ್ರೇಲಿಯಾದ ಬೌಲರ್​ ಲಿಯಾನ್​ ಹೆಸರಿನಲ್ಲಿ ನಿರ್ಮಾಣವಾಗುತ್ತಿತ್ತು. ಆದರೆ..

Nathan Lyon
Nathan Lyon

By

Published : Jun 30, 2023, 7:55 PM IST

ಲಾರ್ಡ್ಸ್​ (ಲಂಡನ್​): ಇಂಗ್ಲೆಂಡ್​ನ ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್​ ಮೈದಾನದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್​ ಲಿಯಾನ್​ ವಿಶಿಷ್ಟ ದಾಖಲೆ ಬರೆಯುವ ತುಡಿತದಲ್ಲಿದ್ದರು. ಆದರೆ ಈ ದಾಖಲೆ ಪೂರ್ಣಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಆ್ಯಶಸ್​​ ಸರಣಿಯ ಎರಡನೇ ಟೆಸ್ಟ್​ನ ಎರಡನೇ ದಿನದಾಟದಲ್ಲಿ ಅವರು​ ಗಾಯಗೊಂಡಿದ್ದಾರೆ.

ನಾಥನ್​ ಲಿಯಾನ್​ ಯಾವುದೇ ಬಿಡುವು ಮತ್ತು ಅನಾರೋಗ್ಯವಿಲ್ಲದೇ ಸತತ 100 ಟೆಸ್ಟ್ ಪಂದ್ಯ​ ಆಡಿದ ಮೊದಲ ಸ್ಪಿನ್ನರ್​ ಎಂಬ ದಾಖಲೆ ಈ ಪಂದ್ಯದಲ್ಲಿ ಸೃಷ್ಟಿಯಾಗುತ್ತಿತ್ತು. ಆದರೆ ನಿನ್ನೆ ಕ್ಯಾಚ್ ವೇಳೆ ಗಾಯಗೊಂಡಿದ್ದು ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ನಾಥನ್ ಲಿಯಾನ್ ಚಹಾ ವಿರಾಮದ ನಂತರ 37ನೇ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ ಅವರ ಬೌಲಿಂಗ್‌ನಲ್ಲಿ ಬೆನ್ ಡಕೆಟ್ ಲೆಗ್-ಸೈಡ್‌ನಲ್ಲಿ ಹೊಡೆದ ಬಾಲ್ ಅ​ನ್ನು ಕ್ಯಾಚ್ ತೆಗೆದುಕೊಳ್ಳಲು ಓಡುತ್ತಿದ್ದರು. ಈ ವೇಳೆ ಅವರ ಕಾಲಿನ ಹಿಮ್ಮಡಿಯ ಮೇಲಿನ ಮಾಂಸಖಂಡಕ್ಕೆ ಒತ್ತಡ ಬಿದ್ದು ತೀವ್ರ ನೋವಿಗೊಳಗಾಗಿದ್ದಾರೆ. ತಕ್ಷಣ ಮೈದಾನದಿಂದ ವೈದ್ಯಕೀಯ ಸಿಬ್ಬಂದಿ ಕರೆದುಕೊಂಡು ಹೋದರು.

ಶುಕ್ರವಾರ ಬೆಳಿಗ್ಗೆ ಲಿಯಾನ್ ಅವರು ತಮ್ಮ ಬಲಗಾಲಿನ ಮೇಲೆ ಬಿಳಿ ಕಾಲ್ಚೀಲ ಧರಿಸಿ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದರು. ಆದರೆ 3ನೇ ದಿನವಾದ ಇಂದು ಪಂದ್ಯದ ವೇಳೆ ಬೌಲಿಂಗ್​​ಗೆ ಮೈದಾನಕ್ಕೆ ಇಳಿಯಲಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾದ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಲಿಯಾನ್ ಸರಣಿಯಲ್ಲಿ ಗಾಯಕ್ಕೊಳಗಾದ ನಂತರ ಪುನರ್ವಸತಿಗೆ ಒಳಗಾಗಲಿದ್ದು, ಗುಣಮುಖರಾದ ನಂತರವೇ ಮೈದಾನಕ್ಕೆ ಮರಳಲಿದ್ದಾರೆ.

"ನಾಥನ್ ಲಿಯಾನ್ ಗಮನಾರ್ಹ ಒತ್ತಡದಿಂದ ಬಳಲುತ್ತಿದ್ದಾರೆ. ಈ ಪಂದ್ಯ ಮುಗಿದ ನಂತರ ಅವರಿಗೆ ಪುನರ್ವಸತಿ ಅವಧಿಯ ಅಗತ್ಯವಿದೆ. ಸರಣಿಯ ಉಳಿದ ಭಾಗಕ್ಕೆ ಅವರ ಲಭ್ಯತೆಯ ಬಗ್ಗೆ ನಿರ್ಧಾರವನ್ನು ಪಂದ್ಯದ ಕೊನೆಯಲ್ಲಿ ತೆಗೆದುಕೊಳ್ಳಲಾಗುವುದು. ನಿಸ್ಸಂಶಯವಾಗಿ ಅವರು ಆಟಕ್ಕೆ ಮರಳುವುದು ಸಾಧ್ಯವಿಲ್ಲ" ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

ಟಾಡ್ ಮರ್ಫಿ ಆ್ಯಶಸ್ ಡೆಬ್ಯೂ?:ಆ್ಯಶಸ್​ನ ಮುಂದಿನ ಪಂದ್ಯದಲ್ಲಿ ಪ್ರವಾಸಿ ತಂಡದಲ್ಲಿರುವ ಸ್ಪಿನ್ನರ್ ಟಾಡ್ ಮರ್ಫಿ ಜಾಗ ಪಡೆಯುವ ಸಾಧ್ಯತೆ ಇದೆ. ಅವರಿಗೆ ಅವಕಾಶ ಸಿಕ್ಕಲ್ಲಿ ಇದು ಅವರ ಆ್ಯಶಸ್​ ಟೆಸ್ಟ್​ನ ಪಾದಾರ್ಪಣೆ ಪಂದ್ಯವಾಗಿರಲಿದೆ. 22 ವರ್ಷ ವಯಸ್ಸಿನ ಆಫ್-ಸ್ಪಿನ್ನರ್ ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಆಡಿದ್ದರು. ಮರ್ಫಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳ ಸಾಧನೆಯೊಂದಿಗೆ ಟೆಸ್ಟ್ ವೃತ್ತಿಜೀವನಕ್ಕೆ ಉತ್ತಮ ಪ್ರಾರಂಭ ಪಡೆದುಕೊಂಡರು. ಈವರೆಗೆ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೂರನೇ ದಿನವಾದ ಇಂದು ಆಸ್ಟ್ರೇಲಿಯಾ ಲಿಯಾನ್​ ರಹಿತವಾಗಿ ತಮ್ಮ ವೇಗದ ಬೌಲಿಂಗ್​ ಬಲದಿಂದ ಇಂಗ್ಲೆಂಡ್​ ತಂಡವನ್ನು ಕಟ್ಟಿಹಾಕಿತು. ಮೊದಲ ಇನ್ನಿಂಗ್ಸ್​​ನಲ್ಲಿ ಆಂಗ್ಲಪಡೆ 325 ರನ್‌ಗಳಿಗೆ ಆಲೌಟ್​ ಆಗಿದೆ. ಬೆನ್ ಸ್ಟೋಕ್ಸ್ ನಾಯಕತ್ವದ 74 ರನ್​ ಗಳಿಸುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡಿದೆ. ಇದರಿಂದ ಮುಂದೆ ಸ್ಪಿನ್ನರ್​ ಜೊತೆ ಆಸ್ಟ್ರೇಲಿಯಾ ಮುಂದಿನ ಪಂದ್ಯವನ್ನು ಆಡಲು ಬಯಸುತ್ತದೆ ಎಂದು ಹೇಳಲು ಆಗುವುದಿಲ್ಲ.

ಇದನ್ನೂ ಓದಿ:Ashes 2023: ಆ್ಯಶಸ್ ಟೆಸ್ಟ್‌- 325ಕ್ಕೆ ಇಂಗ್ಲೆಂಡ್​ ಆಲೌಟ್; ಆಸ್ಟ್ರೇಲಿಯಾಗೆ 91 ರನ್ ಮುನ್ನಡೆ

ABOUT THE AUTHOR

...view details