ಕರ್ನಾಟಕ

karnataka

ETV Bharat / sports

ಸಂಘಟಿತ ಬ್ಯಾಟಿಂಗ್ ಪ್ರದರ್ಶನ... ಮುಂಬೈಗೆ 172 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ರಾಜಸ್ಥಾನ್​ - Buttler

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ರಾಯಲ್ಸ್​ ತಂಡಕ್ಕೆ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 66 ರನ್​ಗಳ ಜೊತೆಯಾಟ ನೀಡಿದರು. 32 ಎಸೆತಗಳಲ್ಲಿ ಬಟ್ಲರ್ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 41ರನ್​ಗಳಿಸಿದರೆ, ಜೈಸ್ವಾಲ್ 20 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ಗಳ ಸಹಿತ 32 ರನ್​ಗಳಿಸಿದರು. ಈ ಇಬ್ಬರನ್ನು ಸ್ಪಿನ್ನರ್ ರಾಹುಲ್ ಚಹಾರ್ ಪೆವಿಲಿಯನ್​ಗಟ್ಟಿ ಮುಂಬೈಗೆ ಬ್ರೇಕ್ ನೀಡಿದರು.

ಮುಂಬೈಗೆ 172 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ರಾಜಸ್ಥಾನ್​
ಮುಂಬೈಗೆ 172 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ರಾಜಸ್ಥಾನ್​

By

Published : Apr 29, 2021, 5:25 PM IST

ನವದೆಹಲಿ: ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರಿದ ರಾಜಸ್ಥಾನ್ ರಾಯಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ 171 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ರಾಯಲ್ಸ್​ ತಂಡಕ್ಕೆ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 66 ರನ್​ಗಳ ಜೊತೆಯಾಟ ನೀಡಿದರು. 32 ಎಸೆತಗಳಲ್ಲಿ ಬಟ್ಲರ್ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 41ರನ್​ಗಳಿಸಿದರೆ, ಜೈಸ್ವಾಲ್ 20 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ಗಳ ಸಹಿತ 32 ರನ್​ಗಳಿಸಿದರು. ಈ ಇಬ್ಬರನ್ನು ಸ್ಪಿನ್ನರ್ ರಾಹುಲ್ ಚಹಾರ್ ಪೆವಿಲಿಯನ್​ಗಟ್ಟಿ ಮುಂಬೈಗೆ ಬ್ರೇಕ್ ನೀಡಿದರು.

ನಂತರ ಬಂದ ನಾಯಕ ಸಂಜು ಸಾಮ್ಸನ್ ಮತ್ತು ಶಿವಂ ದುಬೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 3ನೇ ವಿಕೆಟ್​ಗೆ 57 ರನ್​ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಸಂಜು 27 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 42 ರನ್​ಗಳಿಸಿದರೆ, ದುಬೆ 31 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 35 ರನ್​ಗಳಿಸಿ ಬುಮ್ರಾಗೆ ವಿಕೆಟ್​ ಒಪ್ಪಿಸಿದರು. ಮಿಲ್ಲರ್ ಔಟಾಗದೆ 7, ಪರಾಗ್ ಔಟಾಗದೆ 8 ರನ್​ಗಳಿಸಿದರು.

20 ಓವರ್​ಗಳಲ್ಲಿ ರಾಯಲ್ಸ್ 4 ವಿಕೆಟ್ ಕಳೆದುಕೊಂಡು 171 ರನ್​ಗಳಿಸಿತು. ಮುಂಬೈ ಪರ ರಾಹುಲ್ ಚಹಾರ್​ 33ಕ್ಕೆ 2 ವಿಕೆಟ್​ ಪಡೆದರೆ, ಯಾರ್ಕರ್ ಕಿಂಗ್ ಬುಮ್ರಾ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿ 1 ವಿಕೆಟ್​ ಪಡೆದರು. ಬೌಲ್ಟ್ 37 ರನ್ ನೀಡಿ 1 ವಿಕೆಟ್ ಪಡೆದರು.

ABOUT THE AUTHOR

...view details