ಮ್ಯಾಂಚೆಸ್ಟರ್:ಭಾರತದ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-2 ಅಂತರದ ಹಿನ್ನಡೆಯಲ್ಲಿದೆ. ಇದೀಗ ಫೈನಲ್ ಪಂದ್ಯದ ಗೆಲುವಿಗೆ ಇಬ್ಬರು ಹಿರಿಯ ಆಟಗಾರರಿಗೆ ಮಣೆ ಹಾಕಿದೆ.
ಸೆಪ್ಟೆಂಬರ್ 10ರಿಂದ ಮ್ಯಾಂಚೆಸ್ಟರ್ನಲ್ಲಿ ಬಲಾಢ್ಯ ಭಾರತ-ಇಂಗ್ಲೆಂಡ್ ನಡುವೆ 5ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇಡೀ ಕ್ರಿಕೆಟ್ ಜಗತ್ತೇ ಕುತೂಹಲದ ಕಣ್ಣುಗಳಿಂದ ಕಾಯುತ್ತಿರುವ ಈ ಪಂದ್ಯಕ್ಕೆ ಆತಿಥೇಯರು 16 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಉಪನಾಯಕ ಜೋಸ್ ಬಟ್ಲರ್ ಪಿತೃತ್ವ ರಜೆ ತೆಗೆದುಕೊಂಡು 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಅವರು ಫೈನಲ್ ಪಂದ್ಯಕ್ಕಾಗಿ ತಂಡ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಸ್ಪಿನ್ನರ್ ಜ್ಯಾಕ್ ಲೀಚ್ಗೂ ಅವಕಾಶ ನೀಡಲಾಗಿದೆ.