ದುಬೈ :ಟೀಂ ಇಂಡಿಯಾ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಗಮನ ಸೆಳೆದಿರುವ ಕಾರಣ ಈ ಆಟಗಾರನಿಗೆ ಐಸಿಸಿ ಮಣೆ ಹಾಕಿದೆ.
ಬುಮ್ರಾ ಜೊತೆಗೆ ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಜೋ ರೂಟ್ ಹಾಗೂ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಆಫ್ರೀದಿ ಕೂಡ ತಿಂಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಥಾಯ್ಲೆಂಡ್ನ ನಟ್ಟಾಯ ಬೂಚತಮ್, ಐರ್ಲೆಂಡ್ನ ಗೇಬಿ ಲೂಯಿಸ್ ಮತ್ತು ಐಮಿಯರ್ ರಿಚರ್ಡ್ಸನ್ ಕೂಡ ಗೌರವ ಪಡೆದಿದ್ದಾರೆ.
ಇಂಗ್ಲೆಂಡ್ ಕ್ಯಾಪ್ಟನ್ ರೂಟ್ ಇಂಗ್ಲೆಂಡ್ ವಿರುದ್ಧ ಬುಮ್ರಾ ಅದ್ಭುತ ಪ್ರದರ್ಶನ
ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆದುಕೊಂಡಿದ್ದ ಬುಮ್ರಾ, ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಮಿ ಜೊತೆ ಸೇರಿ 89ರನ್ಗಳ ಅದ್ಭುತ ಜೊತೆಯಾಟ ಪ್ರದರ್ಶಿಸಿದ್ದರು.
ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ 2 ವಿಕೆಟ್ ಪಡೆದಿರುವ ಬುಮ್ರಾ, 24 ರನ್ ಗಳಿಸಿದ್ದಾರೆ. ಉಳಿದಂತೆ ಇಂಗ್ಲೆಂಡ್ನ ಟೆಸ್ಟ್ ಕ್ಯಾಪ್ಟನ್ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಎರಡು ಶತಕ ಸಿಡಿಸಿ ಮಿಂಚಿರುವ ಕಾರಣ ಅವರಿಗೂ ಐಸಿಸಿ ಮಣೆ ಹಾಕಿದೆ.
ಇದನ್ನೂ ಓದಿರಿ: RT-PCR ಟೆಸ್ಟ್ನಲ್ಲಿ ಶಾಸ್ತ್ರಿಗೆ ಕೋವಿಡ್ ದೃಢ, 10 ದಿನ ಐಸೋಲೇಷನ್: ಫೈನಲ್ ಟೆಸ್ಟ್ನಿಂದ ಔಟ್
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕ್ನ ಆಫ್ರೀನ್ 18 ವಿಕೆಟ್ ಪಡೆದು ಗಮನ ಸೆಳೆದಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲೇ 10 ವಿಕೆಟ್ ಪಡೆದಿದ್ದಾರೆ.