ಕರ್ನಾಟಕ

karnataka

ETV Bharat / sports

ಬುಮ್ರಾ 3 ಸ್ವರೂಪದ ಕ್ರಿಕೆಟ್​ನಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ : ಬೈರ್​ಸ್ಟೋವ್​ - ಭಾರತ vs ಇಂಗ್ಲೆಂಡ್​ ಲಾರ್ಡ್ಸ್​ ಟೆಸ್ಟ್​

ಬುಮ್ರಾ ಬಗ್ಗೆ ನಾವು ಚರ್ಚಿಸಿರುವ ಸಂಗತಿಗಳನ್ನು ಇಲ್ಲಿ ನಿಮ್ಮ ಮುಂದೆ ಹೇಳಲು ಆಗುವುದಿಲ್ಲ. ಆದರೆ, ನಮಗೆ ಬುಮ್ರಾ ಅತ್ಯುತ್ತಮ ಬೌಲಿಂಗ್ ಕೌಶಲ್ಯ ಹೊಂದಿದ್ದಾರೆ ಎಂದು ತಿಳಿದಿದೆ. ಹೌದಲ್ವಾ? ಅವರ ಆ್ಯಕ್ಷನ್​, ಅವರು ಚೆಂಡು ಎಸೆಯುವ ವಿಧಾನ ಬೇರೆ ಬೌಲರ್‌​ಗಳಿಗಿಂತ ವಿಭಿನ್ನವಾಗಿದೆ ಎಂದು ಬೈರ್​ಸ್ಟೋವ್​ ಸೋನಿ ಸ್ಪೋರ್ಟ್ಸ್​ ಚಾನೆಲ್​ನಲ್ಲಿ 2ನೇ ಟೆಸ್ಟ್​ಗೂ ಮುನ್ನ ನಡೆದ ಸಂವಾದದ ವೇಳೆ ತಿಳಿಸಿದ್ದಾರೆ..

Jasprit Bumrah vsJasprit Bumrah
ಬೈರ್​ಸ್ಟೋವ್ ಬುಮ್ರಾ

By

Published : Aug 10, 2021, 8:35 PM IST

ಲಂಡನ್ :ಭಾರತ ತಂಡದ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಕ್ರಿಕೆಟ್‌ನ​ ಮೂರು ಮಾದರಿಯಲ್ಲೂ ಬೌಲಿಂಗ್​ ಮಾಡಬಲ್ಲ ಅದ್ಭುತ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಇಂಗ್ಲೆಂಡ್ ಬ್ಯಾಟ್ಸ್​ಮನ್ ಜಾನಿ ಬೈರ್ಸ್ಟೋವ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಮತ್ತು ಅದಕ್ಕೂ ಹಿಂದೆ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬುಮ್ರಾ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆದರೆ, ಟ್ರೆಂಟ್​​ ಬ್ರಿಡ್ಜ್​ನಲ್ಲಿ ನಡೆದ ಪ್ರಸ್ತುತ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್​ ಪಡೆದು ಮಿಂಚಿದ್ದರು. ಬುಮ್ರಾರ ಬೌಲಿಂಗ್ ದಾಳಿಯ ಬಗ್ಗೆ ಕೇಳಿದ್ದಕ್ಕೆ ಬೈರ್​ಸ್ಟೋವ್​ ಅವರನ್ನು ಮೂರು ಸ್ವರೂಪದಲ್ಲಿನ ಅದ್ಭುತ ಬೌಲರ್​ಗಳಲ್ಲಿ ಒಬ್ಬರು ಎಂದು ವರ್ಣಿಸಿದ್ದಾರೆ.

ಬುಮ್ರಾ ಬಗ್ಗೆ ನಾವು ಚರ್ಚಿಸಿರುವ ಸಂಗತಿಗಳನ್ನು ಇಲ್ಲಿ ನಿಮ್ಮ ಮುಂದೆ ಹೇಳಲು ಆಗುವುದಿಲ್ಲ. ಆದರೆ, ನಮಗೆ ಬುಮ್ರಾ ಅತ್ಯುತ್ತಮ ಬೌಲಿಂಗ್ ಕೌಶಲ್ಯ ಹೊಂದಿದ್ದಾರೆ ಎಂದು ತಿಳಿದಿದೆ. ಹೌದಲ್ವಾ? ಅವರ ಆ್ಯಕ್ಷನ್​, ಅವರು ಚೆಂಡು ಎಸೆಯುವ ವಿಧಾನ ಬೇರೆ ಬೌಲರ್‌​ಗಳಿಗಿಂತ ವಿಭಿನ್ನವಾಗಿದೆ ಎಂದು ಬೈರ್​ಸ್ಟೋವ್​ ಸೋನಿ ಸ್ಪೋರ್ಟ್ಸ್​ ಚಾನೆಲ್​ನಲ್ಲಿ 2ನೇ ಟೆಸ್ಟ್​ಗೂ ಮುನ್ನ ನಡೆದ ಸಂವಾದದ ವೇಳೆ ತಿಳಿಸಿದ್ದಾರೆ.

"ನಾವು ಆತನಿಗೆ (ಬುಮ್ರಾ) ಕ್ರೆಡಿಟ್ ಕೊಡಬೇಕು, ಅವರು ವಿಶ್ವದರ್ಜೆಯ ಬೌಲರ್, ಐಪಿಎಲ್‌ನಲ್ಲಿ ಆಡುವಾಗ ಮತ್ತು ಅವರು ಭಾರತಕ್ಕಾಗಿ ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಸಾಮರ್ಥ್ಯವನ್ನು ನೋಡಿದ್ದೇವೆ " ಎಂದು ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಮಳೆಯ ಕಾರಣ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಗುರುವಾರದಿಂದ ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ.

ಇದನ್ನು ಓದಿ: ಒಲಿಂಪಿಕ್ಸ್​ ವೇಳೆ ಅಶಿಸ್ತಿನ ವರ್ತನೆ : ವಿನೇಶ್ ಫೋಗಟ್​ರನ್ನು ಅಮಾನತು ಮಾಡಿದ WFI

ABOUT THE AUTHOR

...view details